Wednesday, February 12, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಡಾ. ಪ್ರಭಾಕರ ಶಿಶಿಲ ಸರ್ವಾಧ್ಯಕ್ಷರಾಗಿ ಆಯ್ಕೆ -ಕಹಳೆ ನ್ಯೂಸ್

ಮಂಗಳೂರು: ಮಂಗಳುರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಫೆಬ್ರವರಿ 21 ಮತ್ತು 22 ರಂದು ನಡೆಯುವ 27ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಅವರು ಪ್ರಕಟಿಸಿದ್ದಾರೆ.
ಡಾ. ಪ್ರಭಾಕರ ಶಿಶಿಲ ಕುರಿತು: ಸುಳ್ಯ ತಾಲೂಕಿನ ಕೂತುಕುಂಜ ಕಜೆ ಎಂಬಲ್ಲಿ ಹುಟ್ಟಿ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಬೆಳೆದು, ಸುಳ್ಯದಲ್ಲಿ ಬದುಕುತ್ತಿರುವ ಡಾ. ಪ್ರಭಾಕರ ಶಿಶಿಲರು ಕನ್ನಡದ ವಿಶಿಷ್ಟ ಪ್ರತಿಭೆ ಹಾಗೂ ಶ್ರೇಷ್ಠ ಸಾಹಿತಿ. ಕನ್ನಡದಲ್ಲಿ 10 ಕಾದಂಬರಿ, 8 ಕಥಾ ಸಂಕಲನ 5 ಪ್ರವಾಸ ಕಥನ ಸೇರಿ ಒಟ್ಟು 54 ಸೃಜನಶೀಲಕೃತಿಗಳನ್ನು ಹಾಗೂ 165 ಅರ್ಥಶಾಸ್ತç ವಿಚಾರ ಸಾಹಿತ್ಯ ಕೃತಿಗಳನ್ನು ಹಾಗೂ ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತç ಕೃತಿಗಳ ರಚಸಿದ್ದಾರೆ. ಕನ್ನಡ ದಿನ ಪತ್ರಿಕೆಗಳು ಹಾಗೂ ನಿಯತಾಕಾಲಿಕಗಳಲ್ಲಿ 250ಕ್ಕೂ ಮಿಕ್ಕಿ ಲೇಖನ, ಕತೆ, ವಿಡಂಬನೆ ಇತ್ಯಾದಿಗಳ ಪ್ರಕಟಿಸಿರುತ್ತಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಶತಮಾನದ ಕವಿಗಳು ಕೃತಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಕವಿತೆಗಳು ಮಂಗಳೂರು ಆಕಾಶವಾಣಿಯಿಂದ ಪ್ರಸಾರವಾಗಿದೆ. ಅನೇಕ ಲಾವಣಿ ಮತ್ತು ಗೀಗೀ ಪದ ರಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು