ಪುತ್ತೂರು : ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜು ಸ್ವಾಯತ್ತತೆ ಪಡೆದ ಹಿನ್ನೆಲೆಯಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದಾಖಲೆಗಳ ಪರಿಶೀಲನೆಗಾಗಿ ಇಂದು ಕಾಲೇಜಿಗೆ ವಿವಿಧ ವಿಶ್ವವಿದ್ಯಾನಿಲಯದಿಂದ ಆಯ್ದ ತಜ್ಞರ ತಂಡದ ಅಧ್ಯಕ್ಷರ ನೇತೃತ್ವದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತç ವಿಭಾಗದ ಪ್ರಾದ್ಯಾಪಕ ಡಾ. ರವೀಂದ್ರ ಬಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಡಿಸಿಯ ನಿರ್ದೇಶಕ ಡಾ. ಗಣೇಶ ಸಂಜೀವ ಕಾಲೇಜಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ತಜ್ಞರ ತಂಡದ ನೇತೃತ್ವ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ರವೀಂದ್ರ ಬಿ ಇವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪಾರಮ್ಯ ಮೆರೆದುದರ ಹಿನ್ನಲೆಯಲ್ಲಿ ವಿವೇಕಾನಂದ ಕಾಲೇಜಿಗೆ ಸ್ವಾಯತ್ತತೆ ದೊರೆತಿರುವುದು ಹೆಮ್ಮೆಯ ಸಂಗತಿ. ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಗಳಿಸುವುದು ನಮ್ಮ ಮುಖ್ಯ ಉದ್ದೇಶವಾಗಬೇಕಿದೆ. ಅದನ್ನು ಸಾಧಿಸಬೇಕಾದರೆ ನಾವೆಲ್ಲರೂ ಪೂರ್ಣ ಮನೋಭಾವದಿಂದ, ಪರಸ್ಪರ ಸಹಕಾರ ಹಾಗೂ ಉತ್ತೇಜನವನ್ನು ನೀಡುತ್ತಾ ವಿಕಸಿತ ಭಾರತದತ್ತ ಸಾಗಬಹುದು ಎಂದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಡಿಸಿಯ ನಿರ್ದೇಶಕ ಡಾ.ಗಣೇಶ ಸಂಜೀವ ಇವರು ಮಾತನಾಡಿ, ಸಂಶೋಧನೆಗೆ ಇಂದಿನ ಕಾಲದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ
ಉಪನ್ಯಾಸಕರು ಸಂಶೋಧನೆ ಕಡೆಗೆ ಹೆಚ್ಚು ಒಲವನ್ನು ತೋರಿಸಬೇಕು. ಇದರಿಂದಾಗಿ ಉಪನ್ಯಾಸಕರಿಗೆ ವಿಫುಲ ಅವಕಾಶಗಳು ತೆರೆದುಕೊಳ್ಳುತ್ತದೆ ಜೊತೆಗೆ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಗೂ ಇದು ಸಹಕಾರಿಯಾಗುತ್ತದೆ ಎಂದರು.
ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದಾಖಲೆಗಳನ್ನು ಪರಿಶೀಲಿಸಿದ ವರದಿಯನ್ನು ಡಾ.ಬಿ ರವೀಂದ್ರ ಹಾಗೂ ತಂಡದವರು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಇವರಿಗೆ
ಹಸ್ತಾಂತರಿಸಲಾಯಿತು.
ಕರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಕಾಲೇಜಿನ ಬಗ್ಗೆ ಸಮಗ್ರ ವರದಿಯನ್ನು ಮಂಡಿಸಿದರು. ಪರೀಶೀಲನಾ ಸಮಿತಿಯ ಸದಸ್ಯರುಗಳಾದ, ಎಸ್ ಡಿಎಂ ಕಾಲೇಜು ಉಜಿರೆ
ಇಲ್ಲಿಯ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಶಂಕರನಾರಾಯಣ ಕೆ, ಡಾ.ಪಿ.ದಯಾನಂದ ಪೈ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿಯ ಪ್ರಾಧ್ಯಾಪಕಿ ಸುಪರ್ಣ,
ಬೆಳ್ತಂಡಿಯ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಡಾ.ರವಿ ಎಂ.ಎನ್, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ, ಮಂಗಳೂರು ವಿಶ್ವವಿದ್ಯಾನಿಲಯ
ಹಂಪನಕಟ್ಟೆ ಕಾಲೇಜಿನ ಪ್ರಾಧ್ಯಾಪಕ ಡಾ.ಜಯವಂತ ನಾಯಕ್ ಹಾಗೂ ಪುತ್ತೂರಿನ ನ್ಯಾಯವಾದಿ ವಿಜಯನಾರಾಯಣ ಇವರುಗಳನ್ನು ಒಳಗೊಂಡ ತಂಡ ಕಾಲೇಜಿನ ವಿವಿಧ ವಿಭಾಗಗಳು, ಪ್ರಯೋಗಾಲಯ, ಗ್ರಂಥಾಲಯ, ಸಂಶೋಧನಾ ಕೇAದ್ರ, ಪರೀಕ್ಷಾಂಗ ವಿಭಾಗ ಹಾಗೂ ಇನ್ನಿತರ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಕಾಲೇಜು ಮುನ್ನಡೆಯುತ್ತಿರುವುದರ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂ ರಾಯ, ಸಂಚಾಲಕ ಮುರಳಿ ಕೃಷ್ಣ ಕೆ. ಎನ್ ಹಾಗೂ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಎಚ್. ಜಿ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಜಗನ್ನಾಥ ಎ, ಸುಕುಮಾರ ರಾವ್ ಎನ್. ಎಸ್ ಉಪಸ್ಥಿತರಿದ್ದರು. ಅಲ್ಲದೆ, ಕಾಲೇಜಿನ ಡೀನ್ ಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಕೆ.ಎಸ್ ಕರ‍್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿನಿ ದೀಪ್ತಿ ಪ್ರಭು ಪ್ರಾರ್ಥಿಸಿದರು.