![](https://www.kahalenews.com/wp-content/uploads/2025/01/04c8ef9521242354074d6d0510af7b8675ee285c99e6efcc7a1619324cbcd385-750x450.jpg)
ತುಮಕೂರು: ಪ್ರಾದೇಶಿಕ ಸಾರಿಗೆ ಕಚೇರಿಯ ನಿವೃತ್ತ ಸಾರಿಗೆ ಅಧಿಕಾರಿ ಎಸ್.ರಾಜು ಅವರ ಆಪ್ತ, ಮಧ್ಯವರ್ತಿ ದಿಬ್ಬೂರಿನ ಸತೀಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸ್.ರಾಜು ಅವರಿಗೆ ಸಂಬಂಧಿಸಿದ ಬೆಂಗಳೂರಿನ ಎರಡು ಮನೆ, ಬಳ್ಳಾರಿಯಲ್ಲಿ ಒಂದು ಮನೆ ಮತ್ತು ತುಮಕೂರಿನ ದಿಬ್ಬೂರು ಬಳಿಯ ರಾಜು ಆಪ್ತ ಸತೀಶ್ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ತುಮಕೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದ ಅಧಿಕಾರಿಗಳ ತಂಡ ದಾಖಲೆ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದೆ