ಪುತ್ತೂರಿನ ಕಬಕದಲ್ಲಿ ರೈಲಿನಡಿಗೆ ಬಿದ್ದು ಮೃತಪಟ್ಟ ವ್ಯಕ್ತಿ : ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪುತ್ತೂರು ನಗರ ಪೊಲೀಸರು ಹಾಗೂ ರೈಲ್ವೆ ಪೊಲೀಸರು – ಕಹಳೆ ನ್ಯೂಸ್
ಪುತ್ತೂರು: ವ್ಯಕ್ತಿಯೋರ್ವ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರಿನ ಕಬಕ ಎಂಬಲ್ಲಿ ಇಂದು ಮಧ್ಯಾಹ್ನದ ವೇಳೆಗೆ ನಡೆದಿದೆ.
ಮೃತ ವ್ಯಕ್ತಿಯನ್ನು ಕಲ್ಲಾಜೆ ಕೆದಿಲ ಗ್ರಾಮದ ಭರತ್ ಪೂಜಾರಿ (67) ಎಂದು ಗುರುತಿಸಲಾಗಿದ್ದು, ಇದು ಆತ್ಮಹತ್ಯೆಯೋ..? ಅಪಘಾತವೋ ಇನ್ನು ತಿಳಿದಿಲ್ಲ.
ಸ್ಥಳಕ್ಕೆ ಬೇಟಿ ನೀಡಿರುವ ಪುತ್ತೂರು ನಗರ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.