ನವದೆಹಲಿ: ಇಸ್ರೋದ ನೂತನ ಅಧ್ಯಕ್ಷರಾಗಿ ಡಾ.ವಿ.ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ. ಅವರು ನೂತನ ಬಾಹ್ಯಾಕಾಶ ಕಾರ್ಯದರ್ಶಿಯೂ ಕಾರ್ಯನಿರ್ವಹಿಸಲಿದ್ದಾರೆ. ಪ್ರಸ್ತುತ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ) ನಿರ್ದೇಶಕರಾಗಿರುವ ಡಾ. ನಾರಾಯಣನ್ ಅವರು ಇಸ್ರೋ ಹೊಸ ಅಧ್ಯಕ್ಷರಾಗಿ ಜನವರಿ 14 ರಿಂದ ಹಾಲಿ ಅಧ್ಯಕ್ಷ ಎಸ್. ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ನಿರ್ದೇಶಕ ವಿ. ನಾರಾಯಣನ್ ಅವರನ್ನು ಬಾಹ್ಯಾಕಾಶ ಇಲಾಖೆ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಎರಡು ವರ್ಷಗಳ ಅವಧಿಗೆ 14.01.2025 ರಿಂದ ಜಾರಿಗೆ ಬರುವಂತೆ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ ಎಂದು ಸಂಪುಟ ನೇಮಕಾತಿ ಸಮಿತಿ, ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ರಾಕೆಟ್ ಮತ್ತು ಬಾಹ್ಯಾಕಾಶ ನೌಕೆ ಪ್ರೊಪಲ್ಷನ್ ತಜ್ಞರಾಗಿರುವ ಡಾ. ನಾರಾಯಣನ್ ಅವರು 1984 ರಲ್ಲಿ ಇಸ್ರೋಗೆ ಸೇರಿಕೊಂಡರು ಮತ್ತು ಎಲ್‌ಪಿಎಸ್‌ಸಿಯ ನಿರ್ದೇಶಕರಾಗುವ ಮೊದಲು ವಿವಿಧ ಸಾಮರ್ಥ್ಯಗಳಲ್ಲಿ ಕಾರ್ಯನಿರ್ವಹಿಸಿದರು.
1989 ರಲ್ಲಿ, ಅವರು ಐಐಟಿ-ಖರಗ್‌ಪುರದಲ್ಲಿ ಮೊದಲ ಶ್ರೇಣಿಯೊಂದಿಗೆ ಕ್ರಯೋಜೆನಿಕ್ ಎಂಜಿನಿಯರಿAಗ್‌ನಲ್ಲಿ ಎಂಟೆಕ್ ಅನ್ನು ಪೂರ್ಣಗೊಳಿಸಿದರು ಮತ್ತು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನಲ್ಲಿ (ಎಲ್‌ಪಿಎಸ್‌ಸಿ) ಕ್ರಯೋಜೆನಿಕ್ ಪ್ರೊಪಲ್ಷನ್ ವಿಭಾಗ ಸೇರಿದರು.