ನಟಿ ಹನಿ ರೋಸ್‌ಗೆ ಲೈಂಗಿಕ ಕಿರುಕುಳ ಆರೋಪ ; ಚೆಮ್ಮನೂರ್ ಮಾಲೀಕ ಅರೆಸ್ಟ್ – ಕಹಳೆ ನ್ಯೂಸ್
ತಿರುವನಂತಪುರಂ: ಮಲಯಾಳಂ ನಟಿ ಹನಿ ರೋಸ್‌ಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಉದ್ಯಮಿ ಬಾಬಿ ಚೆಮ್ಮನೂರ್ ಅವರನ್ನು ಬಂಧಿಸಲಾಗಿದೆ.
ನಟಿ ಹನಿ ರೋಸ್ ಅವರ ದೂರಿನ ಮೇರೆಗೆ ಮಂಗಳವಾರ ದಾಖಲಿಸಿದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಬೋಬಿ ಚೆಮ್ಮನೂರ್ ಅಲಿಯಾಸ್ ‘ಬೋಚೆ’ ಅವರನ್ನು ಕೊಚ್ಚಿ ನಗರ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಬೆಳಗ್ಗೆ ವಯನಾಡಿನಿಂದ ಚೆಮ್ಮನೂರ್‌ರನ್ನು ಬಂಧಿಸಲಾಯಿತು. ಅವರನ್ನು ಕೊಚ್ಚಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 ಸೇರಿದಂತೆ ವಿವಿಧ ಜಾಮೀನು ರಹಿತ ಸೆಕ್ಷನ್‌ಗಳ ಮೂಲಕ ಕೊಚ್ಚಿ ಕೇಂದ್ರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.