ಜ.11 ಮತ್ತು 12 ರಂದು ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲ್ಪಡುತ್ತಿರುವ”ಲಿಟ್ ಫೆಸ್ಟ್ 2025″ :ಖ್ಯಾತ ಸಾಹಿತಿಗಳಾದ ಡಾ. ಎಸ್. ಎಲ್. ಭೈರಪ್ಪ ಅವರಿಂದ ಉದ್ಘಾಟನೆ -ಕಹಳೆ ನ್ಯೂಸ್
ಮಂಗಳೂರು : ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲ್ಪಡುತ್ತಿರುವ”ಲಿಟ್ ಫೆಸ್ಟ್” ಮಂಗಳೂರು ಸಾಹಿತ್ಯೋತ್ಸವದ 7ನೇ ಆವೃತ್ತಿಯು ನಗರದ ಡಾ. ಟಿ.ಎಂ.ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ನನ್ ಸೆಂಟರ್ನಲ್ಲಿ ಜನವರಿ 11 ಮತ್ತು 12 ರಂದು ಜರುಗಲಿದೆ.ನಾಡಿನ ಗೊಳ್ಳಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕರ ಚಿಂತನೆಯಿAದ ಆರಂಭ ಗೊಂಡ ಲಿಟ್ ಫೆಸ್ಟ್ ಇಂದು 7ನೆ ಆವೃತಿಗೆ ದಾಪುಗಾಲಿಟ್ಟಿದೆ. ಇದು ಸಾಹಿತ್ಯ ಹಬ್ಬವಲ್ಲ, ಇದು ಇಡೀ ಜಿಲ್ಲೆಯ ಸಾಹಿತ್ಯಾಸಕ್ತರ ಹಬ್ಬ ಎಲ್ಲರೂ ಒಗ್ಗೂಡಿ ಸಾಹಿತ್ಯೋತ್ಸವವನ್ನು ಅನುಭವಿಸಬೇಕು,ಆನಂದಿಸಬೇಕು ಎನ್ನುವ ದೃಷ್ಟಿಯಿಂದ ಆಯೋಜಿಸಲಾಗುತ್ತದೆ.
ಸಾಹಿತ್ಯಸಕ್ತರಿಗೆ ಮಂಗಳೂರು ಸಾಹಿತ್ಯ ಉತ್ಸವದಲ್ಲಿ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ,ಆರ್ಥಿಕಮತ್ತು ಸಿನಿಮಾ ಸಹಿತ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಹೊಸ ಹೊಸ ಆವಿಷ್ಕಾರ,ಬೆಳವಣಿಗೆಗಳನ್ನ ತಿಳಿಯಲು ಇಲ್ಲಿ ಅವಕಾಶವಿದೆ.
ಅಲ್ಲದೆ ಸಾಹಿತ್ಯ ಉತ್ಸವದಲ್ಲಿ ಚಲನಚಿತ್ರಗಳ ಪ್ರದರ್ಶನಗಳು, ಪರಂಪರೆಯ ಕುರಿತು ಚರ್ಚೆಗಳು ಮತ್ತು ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಪ್ರಸ್ತುತಿಗಳು ಸಹ ನಡೆಯಲಿದೆ.
ಎಲ್ಲಾ ವಯೋಮಾನದ ಆಸಕ್ತರನ್ನು ಆಕರ್ಷಿಸಲು, ವಿವಿಧ ಕಾರ್ಯಕ್ರಮಗಳನ್ನು ಇಲ್ಲಿ ಆ ಯೋಜಿಸಲಾಗಿದ್ದು,ಸ್ಥಳೀಯ ಕಲಾವಿದರು, ಸಾಹಿತಿಗಳು, ಇತಿಹಾಸಕಾರರು, ಸಂಗೀತಗಾರರು ಮತ್ತು ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
ಮಹಿಳೆಯರು, ಮಕ್ಕಳು ಮತ್ತು ಯುವಕರಿಗೆ ಎರಡು ದಿನಗಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಕಾರ್ಯಕ್ರಮಗಳ ವಿವರ.
9.30ಉದಯರಾಗ.
10.00 ಸಮಾರಂಭ ಉದ್ಘಾಟನೆ
ಬೆಳಿಗ್ಗೆ10.45 ಕ್ಕೆ
“Energy for Survival – Security and Climate” ಬಗ್ಗೆ ಇಂಗ್ಲಿಷ್ ಭಾಷೆಯಲ್ಲಿ ಸಂವಾದ ಇದ್ದು, ಹರ್ದೀಪ್ ಸಿಂಗ್ ಪುರಿ ವಿಚಾರ ಮಂಡಿಸುವರು. ಡಾ. ನಂದಕಿಶೋರ್ ಎಂ.ಎಸ್. ಅವರು ನಿರ್ವಹಣೆ ಮಾಡುವರು.
11.45ಕ್ಕೆ ವಿಕ್ರಮ್ ಸೂದ್ “Art and Craft of Building and Dismantling narratives” ವಿಚಾರ ಮಂಡಿಸಲಿದ್ದು, ಪ್ರಶಾಂತ್ ವೈದ್ಯರಾಜ್ ಸಂವಾದ ನಡೆಸುವರು.
ಮಧ್ಯಾಹ್ನ 2ಕ್ಕೆ “ಸಂಸ್ಕೃತಯಾನA” ಎಂಬ ಕಾರ್ಯಕ್ರಮದಲ್ಲಿ ಸಮಸ್ಥಿ ಗುಬ್ಬಿ, ಡಾ.ಎಚ್.ಆರ್.ವಿಶ್ವಾಸ್, ಡಾ.ಶಂಕರ ರಾಜಾರಾಮನ್ ವಿಚಾರ ಮಂಡಿಸಲಿದ್ದು, ಡಾ. ಶಾಂತಲಾ ವಿಶ್ವಾಸ್ ಸಂವಹನಕಾರರಾಗಿ ನಿರ್ವಹಣೆ ಮಾಡುವರು.
3.00 ಗಂಟೆಗೆ “ಪ್ರೋಸೆಸ್ ರೆಫಾರ್ಮ್ಸ್ ಆಸ್ ಪಬ್ಲಿಕ್ ಪಾಲಿಸಿ” ವಿಷಯದ ಕುರಿತು ಸಂಜೀವ ಸಾನ್ಯಾಲ್ ವಿಚಾರ ಮಂಡಿಸಲಿದ್ದು, ಬಂಗಾರಡ್ಕ ವಿಶ್ವೇಶ್ವರ ಭಟ್ ಸಂವಹನಕಾರರಾಗಿ ಭಾಗವಹಿಸುವರು.
ಸಂಜೆ 4 ಗಂಟೆಗೆ “ಗ್ರಾಜುವೇಟಿಂಗ್ ದಿ ಎಜುಕೇಶನಲ್ ಪಾಲಿಸಿ” ಕುರಿತು ಡಾ. ಸಂತಿಶ್ರೀ ಧುಲಿಪುಡಿ ಪಂಡಿತ್, ಡಾ. ವಿನಯ್ ಸಹಸ್ರಬುದ್ಧ ಮಾತನಾಡಲಿದ್ದು, ಡಾ. ವಿನಯಚಂದ್ರ ಭನ್ವತೆ ಸಂವಹನಕಾರರಾಗಿರುವರು.
ಸAಜೆ 5ಕ್ಕೆ ಡೆಮಾಕ್ರೆಸಿ ಆಂಡ್ ಡೆಮಾಕ್ರೆಟಿಕ್ ಗವರ್ನೆನ್ಸ್ ಕುರಿತು ಕೆ.ಅಣ್ಣಾಮಲೈ ವಿಚಾರ ಮಂಡಿಸಲಿದ್ದು, ಜೈದೀಪ್ ಶೆಣೈ ಸಂವಹನಕಾರರಾಗಿರುವರು.
ಜನವರು 11ರಂದು ಎರಡನೇ ಸಭಾಂಗಣದಲ್ಲಿ
ಬೆಳಗ್ಗೆ 10.45ಕ್ಕೆ- ಕನ್ನಡ ಸಾಹಿತ್ಯ ವಿಮರ್ಶೆ ಒಂದು ಅಕಾಡೆಮಿಕ್ ಚರ್ಚೆ ವಿಷಯದಲ್ಲಿ ಜಿ.ಎಸ್.ಅಮೂರ ಶತಮಾನದ ನೆನಪು ಕುರಿತು.
ಡಾ. ಜಿ.ಬಿ.ಹರೀಶ, ಡಾ.ಎನ್.ಎಸ್.ಗುಂಡೂರ, ಡಾ.ಶ್ಯಾಮಸುಂದರ ಬಿದರಕುಂದಿ ವಿಚಾರ ಮಂಡಿಸಲಿದ್ದು, ಡಾ.ಕಾಖಂಡಕಿ ಎಚ್.ವಿ. ಸಂವಹನಕಾರರಾಗಿ ಭಾಗವಹಿಸುವರು.
11.45ಕ್ಕೆ ಪತ್ರಿಕೋದ್ಯಮ ಮತ್ತು ಸಾಹಿತ್ಯ, ಒಂದು ಹರಟೆ ಎಂಬ ವಿಷಯದಲ್ಲಿ ಜೋಗಿ ಮತ್ತು ರವಿ ಹೆಗಡೆ ಮಾತನಾಲಿದ್ದಾರೆ.
2.15ಕ್ಕೆ ‘ಹಳ್ಳಿಯನ್ನು ಕಟ್ಟುವ ಕಷ್ಟ ಸುಖ’ ಕುರಿತು ಶಿವಾನಂದ ಕಳವೆ, ಡಾ. ಪ್ರಕಾಶ ಭಟ್ ಮಾತನಾಡಲಿದ್ದು, ಅರ್ಚನ ಆರ್ಯ ಸಂವಹನಕಾರರಾಗಿ ಭಾಗವಹಿಸುವರು.
3.15ಕ್ಕೆ ಸಿನಿಮೀಯ-ಸಿನಿಕೀಯ ಪುಸ್ತಕ ಬಿಡುಗಡೆ ಮತ್ತು ಚರ್ಚೆ ಇರಲಿದ್ದು, ಅರುಣ್ ಭಾರಧ್ವಾಜ್ ಮತ್ತು ಪ್ರಕಾಶ್ ಬೆಳವಾಡಿ ಭಾಗವಹಿಸುವರು. ಶೈಲೇಶ್ ಕುಲಕರ್ಣಿ ಸಂವಹನ ನಡೆಸುವರು.
4.15ಕ್ಕೆ “ಸೈಟ್ ಆಂಡ್ ಇನ್ಸೆಟ್” ಕುರಿತು ಡಾ. ಮಲ್ಲಪ್ಪ ಭಂಡಿ, ಡಿ.ಐಶ್ವರ್ಯ ಮಾತನಾಡಲಿದ್ದು, ಪ್ರಥ್ವಿ ಕಾರಿಂಜೆ ಸಂವಹನ ಮಾಡುವರು.
5.15ಕ್ಕೆ ಗುರುದತ್ ಶತಮಾನೋತ್ಸವ ಸ್ಮರಣೆ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆ, ಸಂವಾದ “ಥ್ಯಾಂಕ್ಯೂ ಗುರುದತ್” ಎಂಬ ವಿಷಯದಲ್ಲಿ ಲತಾ ಜಗತಿಯಾನಿ, ಪ್ರಕಾಶ್ ಬೆಳವಾಡಿ ಮಾತನಾಡಲಿದ್ದು, ಕಾರ್ತಿಕೇಯ ಗೋಸ್ವಾಮಿ ಸಂವಹನ ನಡೆಸಲಿದ್ದಾರೆ.
ಮೊದಲ ದಿನದ ಹರಟೆಕಟ್ಟೆಯಲ್ಲಿ “ಚಿಲಿಪಿಲಿ” ಕಾರ್ಯಕ್ರಮವನ್ನು ವಂದನಾ ರೈ ಕಾರ್ಕಳ 10.30ಕ್ಕೆ ನಡೆಸಿಕೊಡಲಿಲಿದ್ದಾರೆ.
2.00 ಗಂಟೆಗೆ ಡಾ.ತುಕಾರಾಮ ಪೂಜಾರಿ ಅವರು ತುಳು ಸಾಹಿತ್ಯ, ಆಳ, ಅಗಲ, ಆವಿಷ್ಕಾರ ಕುರಿತು ಮಾತನಾಡುವರು.ಶಶಿರಾಜ್ ಕಾವೂರು ಸಂವಹನಕಾರರಾಗಿ ಸಂವಹನ ನಡೆಸಲಿದ್ದಾರೆ.
3.00 ಗಂಟೆಗೆ “ರೋಲ್ ಆಂಡ್ ಗೋಲ್ ಆಫ್ ಇಂಡಿಯನ್ ಡಯಾಸ್ಪೋರ” ಕುರಿತು ವೀಣಾ ರಾವ್ ಮಾತನಾಡಲಿದ್ದು, ಬಿ.ಅರ್ಚನಾ ಬಾಳಿಗ ಸಂವಹನ ನಡೆಸುವರು.
4.00ಗಂಟೆಗೆ ಜಾನಪದ ಗೊಂದಲಿಗರ ಪದಗಳು, ಹಾಡು ಮತ್ತು ಕಥೆ ಕುರಿತು ವಿಠಲ ಗೋಂದಳೆ ಮಾತನಾಡಲಿದ್ದಾರೆ
5.00 ಗಂಟೆಗೆ “ಕಥಾ ಓದು”ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಕುಂಠಿನಿ, ಸ್ಮಿತಾ ರಾಘವೇಂದ್ರ ಮತ್ತು ಸಚಿನ್ ತೀರ್ಥಹಳ್ಳಿ ಭಾಗವಹಿಸಲಿದ್ದು,ಸಂವಹನಕಾರರಾಗಿ ವಿಷ್ಣುಧರನ್ ನಿರ್ವಹಿಸುವರು.
ಎರಡನೇ ದಿನದ ಕಾರ್ಯಕ್ರಮ:-
ಒಂದನೇ ಸಭಾಂಗಣದಲ್ಲಿ.
ಎರಡನೇ ದಿನ 9.30ಗೆ ಮೇಧಾ ಉಡುಪ ಅವರಿಂದ ಉದಯರಾಗ.
10.00 ಗಂಟೆಗೆ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರಶಸ್ತಿ ಪ್ರದಾನ
11.15ಕ್ಕೆ .ಮಾಗಧ ಲೋಕಾರ್ಪಣ ಮತ್ತು ಅವಲೋಕನದಲ್ಲಿ ಸಹನಾ ವಿಜಯಕುಮಾರ ಭಾಗವಹಿಸುವರು. ಡಾ. ಅಜಕ್ಕಳ ಗಿರೀಶ್ ಭಟ್ ಸಂವಹನಕಾರರಾಗಿರುವರು.
12.15ಕ್ಕೆ ಐಕಾನ್ಸ್ ಫಾರ್ ಟುಡೇ ಡೂಸ್ ಆಂಡ್ ಡೋಂಟ್ಸ್,( ಟಿಪ್ಪು ಸುಲ್ತಾನ್ ದಿ ಸಾಗಾ ಆಫ್ ಮೈಸೂರ್ ಇಂಟರ್ಜೆನಮ್) 1760-1799 ಪುಸ್ತಕ ಲೋಕಾರ್ಪಣೆ, ಸಂವಾದವಿದ್ದು, ಡಾ. ವಿಕ್ರಮ್ ಸಂಪತ್, ಪ್ರಕಾಶ್ ಬೆಳವಾಡಿ ಸಂವಾದ ನಡೆಸುವರು, ಹರ್ಷ ಶಂಕರ ಭಟ್ ಸಂವಹನಕಾರರಾಗಿ ನಿರ್ವಹಣೆ ಮಾಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಸಿನಿಮಾ ತಾಂತ್ರಿಕತೆ ಕುರಿತು ಗಿರೀಶ್ ಕಾಸರವಳ್ಳಿ ,ಗೋಪಾಲಕೃಷ್ಣ ಪೈ, ಮಾತನಾಡಲಿದ್ದು, ಅರುಣ್ ಭಾರಧ್ವಾಜ್ ಸಂವಹನಕಾರರಾಗಿದ್ದಾರೆ.
ಮಧ್ಯಾಹ್ನ 3ಕ್ಕೆ ಫ್ರಮ್ ಇಂಡಿವಿಜುವಲ್ ಟು ಮಧ್ಯಾಹ್ನ 3ಕ್ಕೆ ಪ್ರೊಮ್ ಇಂಡಿವಿಜುವಲ್ ಟು ಇನ್ ಡಿವಿಸಿಬಲ್ ಎಂಬ ವಿಷಯದಲ್ಲಿ ಸ್ವಾಮಿ ಮಹಾಮೇಧಾನಂದ, ಸತ್ಯೇಶ್ ಬೆಳ್ಳೂರು ಮಾತನಾಡಲಿದ್ದು, ಡಾ. ಶಂಕರ್ ರಾಜಾರಾಮ್ ಸಂವಹನ ನಡೆಸಲಿದ್ದಾರೆ.
4.00 ಗಂಟೆಗೆ ಭಾರತೀಯ ಭಾಷೆಗಳಿಗೆ ದೇಶಿಯತೆ ಕೊಡುಗೆಗಳು ಕುರಿತು ಡಾ. ಜಿ.ಬಿ.ಹರೀಶ, ವಿ.ನಾಗರಾಜ್, ಡಾ.ಎಚ್.ಆರ್.ವಿಶ್ವಾಸ್ ಮಾತನಾಡಲಿದ್ದಾರೆ, ಕ್ಷಮಾ ನರಗುಂದ ಸಂವಹನ ನಡೆಸುವರು.
ಸಮಾರೋಪ ಸಮಾರಂಭದಲ್ಲಿ ಶತಾವಧಾನಿ ಡಾ.ಆರ್. ಗಣೇಶ್ ಮತ್ತು ಡಾ. ಅಜಕ್ಕಳ ಗಿರೀಶ ಭಟ್ ಭಾಗವಹಿಸುವರು.
11 ಗಂಟೆಗೆ ಹರಟೆಕಟ್ಟೆಯಲ್ಲಿ ಡಾ. ಎಸ್.ಎಲ್.ಭೈರಪ್ಪ ಜೊತೆ ಸಂವಾದ.
ಮಧ್ಯಾಹ್ನ 2.15ಕ್ಕೆ ರಸಪ್ರಶ್ನೆ ಕಾರ್ಯಕ್ರಮದ ಅಂತಿಮ ಘಟ್ಟ ನಡೆಯುವುದು.
ಎರಡನೇ ದಿನದ ಕಾರ್ಯಕ್ರಮ
ಎರಡನೇ ಸಭಾಂಗಣದಲ್ಲಿ.
10.15ಕ್ಕೆ ಹಿಮಾಲಯನ್ ಜಿಯೋಪಾಲಿಟಿಕ್ಸ್ ಕುರಿತು ಡಾ.ಕ್ಲಾಔಡೆ ಅರ್ಪಿ, ದಿಲೀಪ್ ಸಿನ್ಹ, ಜಂಗ್ಚುಪ್ ಚೊಡೆನ್ ಮಾತನಾಡುವರು, ಬಿಪೀಂದ್ರ ಅವರು ಸಂವಹನ ನಡೆಸುವರು.
11.15ಕ್ಕೆ ನಾಗೋರ್ಟ್ ಅಂಡರ್ ಸೀಝ್ ಕುರಿತು ಬಾವನ್ ಅರೋರ,ಮೆಗ್ನ ಗಿರೀಶ್, ಶಿವ್ ಅರೂರ್ ಮಾತನಾಡುವರು. ಸುರಭಿ ಹೊಡಿಗೆರೆ ಸಂವಹನ ನಡೆಸುವರು.
12.15ಕ್ಕೆ ವುಮನ, ಜೆಂಡರ್ ಮತ್ತು ಸೊಸೈಟಿ ಕುರಿತು ಡಾ. ವರದ ಸಂಭುಸ್, ಕ್ಷಮಾ ನರಗುಂದ ಮಾತನಾಡುವರು. ಡಾ. ಸುಷ್ಮಾ ಶೆಟ್ಟಿ ಸಂವಹನ ನಡೆಸುವರು.
“ಅಂಬೇಡ್ಕರ್ ಮತ್ತು ಸಂವಿಧಾನ” ಸತ್ಯ ಮತ್ತು ಮಿಥ್ಯ ಕುರಿತು ವಿಕಾಸ್ ಕುಮಾರ್ ಪಿ. ಎಸ್, ಮಹೇಶ್ ಮಾತನಾಡುವರು 3 ಗಂಟೆಗೆ ಯುವ ಮಿಥ್ಯ ಕುರಿತು ವಿಕಾಸ್ ಕುಮಾರ್ ಪಿ. ಎನ್ , ಮಹೇಶ್ ಮಾತನಾಡುವರು.
3 ಗಂಟೆಗೆ ಯುವ ಕವಿಗೋಷ್ಠಿಯಲ್ಲಿ ಸತೀಶ ಹೆಗಡೆ ಶಿರಸಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಸ್ಮಿತಾ ಅಮೃತರಾಜ್ ಭಾಗವಹಿಸುವರು. ಗುರುಪ್ರಸಾದ್ ಟಿ.ಎನ್. ನಡೆಸಿಕೊಡುವರು.