Recent Posts

Monday, January 20, 2025
ಸುದ್ದಿ

ಅನಂತ ಕುಮಾರ್ ಆತ್ಮಕ್ಕೆ ದೇವರು ಸದ್ಗತಿ ನೀಡಲಿ: ಕೋಟಾ ಸಂತಾಪ – ಕಹಳೆ ನ್ಯೂಸ್

ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಕ್ಕೆ ಕೇಂದ್ರದ ಅನುದಾನ ತರಲು ಅನಂತ್ ಕುಮಾರ್ ಪಾತ್ರ ಅಪಾರವಾಗಿದೆ.ಅನಂತ ಕುಮಾರ್ ಅಗಲಿಕೆ ರಾಷ್ಟ್ರ ಮತ್ತು ರಾಜ್ಯ ಕ್ಕೆ ನಷ್ಟ ಎಂದ ಕೋಟಾ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಮೇಲೆ ಅನೇಕ ಸುಧಾರಣೆಗಳನ್ನು ಜಾರಿಗೆ ತಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರದಲ್ಲಿ ಒಂದು ದಿನವೂ ರಸಗೊಬ್ಬರದ ಕೊರತೆ ಕಂಡಿಲ್ಲ. ಅಟಲ್ ಜೀ ಚಿತಾಭಸ್ಮ ವಿಸರ್ಜನೆ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಇತ್ತು. ಅವರನ್ನು ಮುಟ್ಟಿದ ಸಂದರ್ಭದಲ್ಲಿ ಅನುಭವವಾಗುತ್ತಿತ್ತು. ಅನಂತ ಕುಮಾರ್ ಆತ್ಮಕ್ಕೆ ದೇವರು ಸದ್ಗತಿ ನೀಡಲಿ ಎಂದು ಸಂತಾಪ ಸೂಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು