Friday, April 11, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು: ಮಧ್ಯವರ್ತಿಯೊಬ್ಬ ಮುಡಾ ಕಚೇರಿಯಲ್ಲಿ ಕಡತ ತಿದ್ದಿದ ವಿಡಿಯೋ ವೈರಲ್-ಕಹಳೆ ನ್ಯೂಸ್

ಮಂಗಳೂರು: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯೊಬ್ಬ ಕಡತ ಪರಿಶೀಲಿಸಿ ಪೆನ್‌ನಲ್ಲಿ ತಿದ್ದುವ ವೀಡಿಯೋ ವೈರಲ್ ಆಗಿದೆ.

ಜ.7 ರಂದು ಮಧ್ಯಾಹ್ನ 1.30ಕ್ಕೆ ರೆಕಾರ್ಡ್ ಆದ ಸಿಸಿಟಿವಿ ವೀಡಿಯೊದಲ್ಲಿ ಪತ್ತೆ ಹಚ್ಚಲಾಗಿದೆ. ಮಧ್ಯವರ್ತಿಯೊಬ್ಬ ಮುಡಾದ ಮೊದಲ ಮಹಡಿಯಲ್ಲಿರುವ ಕಚೇರಿಗೆ ಬಂದು, ಮಧ್ಯಾಹ್ನ ಊಟದ ಸಮಯವಾದ ಕಾರಣ ಅಲ್ಲಿ ಯಾರೂ ಇಲ್ಲದಿದ್ದಾಗ ಟೇಬಲ್ ಮೇಲಿನ ಕಡತಗಳಲ್ಲಿ ತನಗೆ ಬೇಕಾದದ್ದನ್ನು ಹುಡುಕಿ, ತನ್ನದೇ ಪೆನ್ ನಿಂದ ತಿದ್ದುವುದನ್ನು ಸಿಸಿಟಿವಿ ವಿಡಿಯೋದಲ್ಲಿ ನೋಡಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಮಧ್ಯವರ್ತಿ ಅಕ್ರಮ ಪ್ರವೇಶದ ಬಗ್ಗೆ ಮುಡಾ ಅಧಿಕಾರಿಗಳಿನ್ನೂ ಪೊಲೀಸರಿಗೆ ದೂರು ದಾಖಲಿಸಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ