ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.12ರಿಂದ 14ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ-ಕಹಳೆ ನ್ಯೂಸ್
ಪುತ್ತೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಇದೇ ಬರುವ ಜ.12ರಿಂದ 14ರವರೆಗೆ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಜ.2ರಂದು ಗೊನೆ ಮುಹೂರ್ತ ನಡೆದಿದ್ದು, ಜ.12ರಂದು ಬೆಳಗ್ಗೆ ಬಲಿವಾಡು ಶೇಖರಣೆ, ಹಸಿರುವಾಣಿ ಹೊರೆಕಾಣಿಕೆ ಸಂಗ್ರಹ, ಉಗ್ರಾಣ ತುಂಬಿಸುವುದು, ಮಹಾ ಪೂಜೆ, ಮಹಾ ಗಣಪತಿ ಪೂಜೆ, ಅತ್ತಾಳಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ ಹಾಗೂ ಅನ್ನಪ್ರಸಾದ ನಡೆಯಲಿದೆ, ಸಂಜೆ 7ರಿಂದ ವಿಧುಷಿ ಶ್ರೀಮತಿ ಸುಜಾತ ಸುಧೀರ್ ನಾಟ್ಯ ಶಿವ ನೃತ್ಯಶಾಲೆ ಕಾಸರಗೋಡು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಮರುದಿನ ಕ್ಷೇತ್ರöಕ್ಕೆ ತಂತ್ರಿಗಳ ಆಗಮನವಾಗಲಿದ್ದು, ದೇವರಿಗೆ ಸ್ವರ್ಣಗಿಂಡಿ, ಸ್ವರ್ಣ ಆಭರಣ ಅರ್ಪಿಸುವುದು, ಜಯ-ವಿಜಯರ ಪ್ರತಿಷ್ಟೆ ಹಾಗೂ ನೂತನ ಅಶ್ವತ್ಥ ಕಟ್ಟೆಯ ಲೋಕಾರ್ಪಣೆ, ಶ್ರೀ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ, ವಾದ್ಯಮೇಳದೊಂದಿಗೆ ತೀರ್ಥ ತರಲು ಹೊರಡುವುದು, ಬಳಿಕ ಮಹಾಗಣಪತಿ ಹವನ, ನವಕಾಭಿಷೇಕ, ತುಲಾಭೃಆ ಸೇವೆ, ಮಹಪೂಜೆ, ಪಲ್ಲಪೂಜೆ, ಬಲಿಹೊರಡುವುದು, ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ,ಶ್ರೀ ದೇವರ ಉತ್ಸವ ಬಲಿ, ಶ್ರೀ ಭೂತ ಬಲಿ,ಕಟ್ಟೆ ಪೂಜೆ (ವಸಂತ ಕಟ್ಟೆ ಪೂಜೆಯಲ್ಲಿ ಕಟ್ಟೆ ಪೂಜೆ ಮಾಡಿಸುವವರಿಗೆ ಅವಕಾಶವಿದ್ದು), ಸುಡುಮದ್ದು ಪ್ರದರ್ಶನ ಹಾಗೂ ಅನ್ನಪ್ರಸಾದ ನಡೆಯಲಿದೆ, ಬೆಳಿಗ್ಗೆ 8ರಿಂದ 10ರ ತನಕ ಸರ್ವಶಕ್ತಿ ಮಹಿಳಾ ಭಜನಾ ತಂಡ ಪಡುಮಲೆ ಮತ್ತು ವರಮಹಾಲಕ್ಷೀ ಮಹಿಳಾ ತಮಡ ಪಡುಮಲೆ ಇವರಿಂದ ಭಜನಾ ಸಂಕೀರ್ತನ ಸೇವೆ ನಡೆಯಲಿದೆ.
ದಿನಾಂಕ:14 ರಂದು ಶ್ರೀ ದೇವರ ಬಲಿಹೊರಡುವುದು,ದರ್ಶನ ಬಲಿ,ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ನಂತರ ರಾತ್ರಿ 8 ಗಂಟೆಗೆ ಶ್ರೀ ದೇವರಿಗೆ ರಂಗಪೂಜೆ, ರಂಗಪೂಜೆ ಮಾಡಿಸುವವರಿಗೆ ಅವಕಾಶ, ಹಾಗೂ ಅನ್ನ ಪ್ರಸಾದ ನಡೆಯಲಿದ್ದು, ಸ್ಪರ್ಶ ಕಲಾ ತಂಡ,ಸುರತ್ಕಲ್ ಇವರಿಂದ “ನಿರೆಲ್” ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ.