Friday, January 10, 2025
ದಕ್ಷಿಣ ಕನ್ನಡಬೆಳ್ತಂಗಡಿಶಿಕ್ಷಣಸುದ್ದಿ

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ : ಸಾಂಸ್ಕೃತಿಕ ಜಗತ್ತನ್ನೇ ಬೆಸೆಯುವ ಶಕ್ತಿ ಕಾಲ್ಪನಿಕ ಬರವಣಿಗೆಗಿದೆ: ಡಾ. ಸತೀಶ್ಚಂದ್ರ ಎಸ್.-ಕಹಳೆ ನ್ಯೂಸ್

“ಅನುವಾದವು ಕೇವಲ ಪದಗಳನ್ನು ಅನುವಾದಿಸುವುದಲ್ಲದೆ ಅದನ್ನು ಮೀರಿ ನಮ್ಮ ಸಂಸ್ಕೃತಿ, ಜೀವನಶೈಲಿ, ಸಂಪ್ರದಾಯವನ್ನು ಪರಿಚಯಿಸುವ ಕಾರ್ಯ ನಿರ್ವಹಿಸುತ್ತದೆ. ಸಾಂಸ್ಕೃತಿಕ ಜಗತ್ತನ್ನೇ ಬೆಸೆಯುವ ಶಕ್ತಿ ಕಾಲ್ಪನಿಕ (ಫಿಕ್ಷನ್) ಬರವಣಿಗೆಗಿದೆ” ಎಂದು ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗ (ಸ್ನಾತಕ, ಸ್ನಾತಕೋತ್ತರ) ಆಯೋಜಿಸಿದ ‘ಫಿಕ್ಷನಲ್ ರೈಟಿಂಗ್: ಟ್ರಾನ್ಸ್ಲೇಶನ್ಸ್ ಆ್ಯಂಡ್ ಪರ್ಫಾರ್ಮೆನ್ಸ್’ (Fictional Writing: Translations and Performances) ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲಾ ರೀತಿಯ ಸೃಜನಶೀಲ ಬರವಣಿಗೆಗೆ ಕಲ್ಪನೆಯು ಅಡಿಪಾಯವಾಗಿರುತ್ತದೆ. ಭಾಷಾಂತರ, ಅನುವಾದ ಕಾರ್ಯವು ಜಾಗತಿಕ ಸಾಹಿತ್ಯವನ್ನು ಆನಂದಿಸುತ್ತದೆ ಹಾಗೂ ಪ್ರಪಂಚದ ಪ್ರತಿಯೊಂದು ಮೂಲೆಯ ಕಲೆ, ಸಂಸ್ಕೃತಿ, ಇತಿಹಾಸ ತಿಳಿಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಅನುವಾದವು ಸಾಂಸ್ಕೃತಿಕ ಸಾಮರಸ್ಯವನ್ನು ಬೆಸೆಯುವುದಲ್ಲದೆ ಜಾಗತೀಕರಣದ ಪ್ರಕ್ರಿಯೆಗೂ ವಿಶೇಷವಾಗಿ ಸಹಾಯ ಮಾಡುತ್ತದೆ. ಅನುವಾದವು ಸಂವಹನವನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ ಎಂದರು.

ಜನರನ್ನು ಹೆಚ್ಚು ಗಮನಿಸುವುದರಿಂದ ಸೃಜನಶೀಲ ಬರವಣಿಗೆಗೆ ಉತ್ತಮ ಉಪಾಯವನ್ನು ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿ, ಗೋವಾ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಪಾದ ಭಟ್ ಹಾಗೂ ಕುಮಟಾದ ಕಮಲ ಬಾಳಿಗ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಮತ್ತು ಖ್ಯಾತ ಬರಹಗಾರ ಡಾ. ಶ್ರೀಧರ ಬಳಗಾರ ಅವರನ್ನು ಸನ್ಮಾನಿಸಲಾಯಿತು.

ಡಾ. ಶ್ರೀಪಾದ ಭಟ್ ಹಾಗೂ ಡಾ. ಶ್ರೀಧರ ಬಳಗಾರ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಆಡಳಿತಾಂಗ ಕುಲಸಚಿವೆ ಡಾ. ಶಲೀಫ್ ಕುಮಾರಿ, ಪರೀಕ್ಷಾಂಗ ಕುಲಸಚಿವೆ ನಂದಾ ಕುಮಾರಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ಕಾರ್ಯಕ್ರಮ ಸಂಯೋಜಕ ಸೂರ್ಯನಾರಾಯಣ ಭಟ್ ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀಧೃತಿ ಮತ್ತು ತಂಡದವರು ಪ್ರಾರ್ಥಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಜಾನನ ಆರ್. ಭಟ್ ಸ್ವಾಗತಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಮಂಜುಶ್ರೀ ಆರ್. ವಂದಿಸಿದರು. ಅಧ್ಯಾಪಕರಾದ ವಿಘ್ನೇಶ್ ಐತಾಳ್ ಹಾಗೂ ಶುಭರಾಣಿ ನಿರೂಪಿಸಿದರು.