ಜ.14 ರಿಂದ 19ರವರೆಗೆ ಆದಿಪರ್ಮಲೆಯಲ್ಲಿ ಶ್ರೀ ದೈವಗಳ ವರ್ಷಾವಧಿ ನೇಮೋತ್ಸವ-ಕಹಳೆ ನ್ಯೂಸ್
ಪುತ್ತೂರು : ಆದಿಪರ್ಮಲೆ ಅಂತ್ಯಪುತ್ಯೆ ನುಡಿಗಟ್ಟಿನಂತೆ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವರ್ಷಾವಧಿ ಶ್ರೀ ದೈವಗಳ ನೇಮೋತ್ಸವವು ಜ.14 ರಿಂದ 19ರವರೆಗೆ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ,ಧಾರ್ವಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಜ.14 ರಂದು ರಾತ್ರಿ ಭಂಡಾರ ತೆಗೆಯುವುದು, ಬಳಿಕ ಧ್ವಜಾರೋಹಣ,ಬೀರತಂಬಿಲ ನಡೆಯಲಿದೆ.
ಜ.15 ರಂದು ಬೆಳಿಗ್ಗೆ 6 ಗಂಟೆಗೆ 48 ಕಾಯಿಗಳ ಗಣಪತಿ ಹೋಮ, ಬಳಿಕ ಆನೆ ಚಪ್ಪರ ಏರಿಸುವುದು,ಮಕರ ತೋರಣ ಏರಿಸುವುದು, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ ಪಾಲಕ್ಕಿ ಉತ್ಸವ,ಬೀರತಂಬಿಲ ನಡೆಯಲಿದೆ.
ಜ.16 ರಂದು ಬೆಳಿಗ್ಗೆ 11ಕ್ಕೆ ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಬಳಿಕ ರಾತ್ರಿ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಲಿದ್ದು, ಜ.17 ರಂದು ಬೆಳಿಗ್ಗೆ 11ಕ್ಕೆ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದು, ರಾತ್ರಿ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಲಿದೆ.
ಜ.18 ರಂದು ಬೆಳಿಗ್ಗೆ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು ಮಲರಾಯ ದೈವದ ನೇಮ, ಬಳಿಕ ವ್ಯಾಘ್ರ ಚಾಮುಂಡಿ (ರಾಜನ್) ದೈವದ ನೇಮ, ಪ್ರಸಾದ ವಿತರಣೆ,ಹಾಗೂ ಅನ್ನಪ್ರಸಾದ ನಡೆಯಲಿದೆ.
ಸಂಜೆ 5ಕ್ಕೆ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ಬಂದು, ರಾತ್ರಿ ಪಡುಮಲೆ-ದೊಡ್ಡಮನೆಯಲ್ಲಿ ಅವಭೃತ ಸ್ಥಾನ ನಡೆದು, ಕಟ್ಟೆ ಪೂಜೆ, ಬಳಿಕ ಧ್ವಜಾವರೋಹಣ, ರುದ್ರಚಾಮುಂಡಿ ದೈವದ ನೇಮ, ನವಕಾಭಿಷೇಕ,ಬಳಿಕ ಗುಳಿಗ ದೈವದ ನೇಮ ನಡೆಯಲಿದೆ. ಇನ್ನು ಜ.19ರಂದು ಬೆಳಿಗ್ಗೆ 10ಕ್ಕೆ ಪಡುಮಲೆ ದೇವಸ್ಥಾನದ ಪಿಲಿಮಾಡದ ವಠಾರದಲ್ಲಿ ವ್ಯಾಘ್ರಚಾಮುಂಡಿ ನೇಮ ನಡೆಯಲಿದೆ.