Sunday, January 12, 2025
ಬೆಂಗಳೂರುಸಿನಿಮಾಸುದ್ದಿ

ಮಾಜಿ ಸಿಎಂ ಜೊತೆ ನಟಿ ರಚಿತಾ ರಾಮ್ ಒಡನಾಟ : ಲಾಯರ್ ಜಗದೀಶ್ ಆರೋಪಕ್ಕೆ ಡಿಂಪಲ್‌ ಕ್ವೀನ್ ತಿರುಗೇಟು – ಕಹಳೆ ನ್ಯೂಸ್ 

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಡಿಮ್ಯಾಂಡ್‌ನಲ್ಲಿ ಇರುವ ನಟಿ. ನಟಿ ರಚಿತಾ ರಾಮ್ ಅವರು ಸಾಕಷ್ಟು ಕಷ್ಟಗಳಿಂದ ಮೇಲೆ ಬಂದವರು. 750 ರೂಪಾಯಿ ಸಂಬಳದಿಂದ ಸಿನಿ ಲೋಕಕ್ಕೆ ಎಂಟ್ರಿಯಾಗಿದ್ದಾರೆ. ಸಾಕಷ್ಟು ಕಷ್ಟಗಳನ್ನ ಅನುಭವಿಸಿದ್ದು, ಇದೀಗ ದೊಡ್ಡ ಸ್ಟಾರ್‌ ನಟಿಯರಲ್ಲಿ ರಚಿತಾ ರಾಮ್‌ ಸಹ ಒಬ್ಬರಾಗಿದ್ದಾರೆ.


ನಟಿ ರಚಿತಾ ರಾಮ್ ಸದ್ಯ ಡಿಮ್ಯಾಂಡ್‌ನಲ್ಲಿ ಇರುವ ನಟಿ. ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದು, ಲೇಡಿ ಸೂಪರ್ ಸ್ಟಾರ್ ಕಿರೀಟ ಪಡೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬೇಡಿಕೆಯ ಹೀರೋಯಿನ್ ಎನಿಸಿಕೊಂಡಿರುವ ರಚಿತಾ ರಾಮ್‌ ವಿರುದ್ಧ ಕೆಲ ವದಂತಿಗಳು ಕೇಳಿ ಬಂದಿದ್ದು, ಈ ಕುರಿತು ನಟಿ ರಚಿತಾ ರಾಮ್‌ ಅವರು ತುಂಬಾ ತಾಳ್ಮೆಯಿಂದ ಉತ್ತರವನ್ನ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಗ್ ಬಾಸ್ ಮೂಲಕ ಎಲ್ಲಾರ ಗಮನ ಸೆಳೆದಿರುವ ಲಾಯರ್ ಜಗದೀಶ್ ಅವರು, ನಟಿ ರಚಿತಾ ರಾಮ್ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ಒಂದನ್ನು ನೀಡಿದ್ದರು. ‘ರಚಿತಾ ರಾಮ್ ಅವರಿಗೆ ರಾಜಕಾರಣಿಗಳ ಜೊತೆ ಒಡನಾಟ ಇದೆ. ರಾಜಕಾರಣಿಗಳ ಜೊತೆ ವ್ಯವಹಾರ ಮಾಡುತ್ತಾರೆ. ರಾಜಕಾರಣಿಗಳ ಕೃಪಾಕಟಾಕ್ಷದಿಂದ ಬೆಳೆಯುತ್ತಿದ್ದಾರೆ ಎಂಬ ಆರೋಪ ಇದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ರಚಿತಾ ರಾಮ್ ಓಡಾಲು ಬಳಸುವ ಕಾರು ಕೋಟಿ ಬೆಲೆ, ರಾಜರಾಜೇಶ್ವರಿ ನಗರದಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಎಲ್ಲಿಂದ ಹಣ ಬರುತ್ತಿದೆ ಎಂಬ ಪ್ರಶ್ನೆ ಶುರುವಾಗಿತ್ತು. ಅದಕ್ಕೆ ನಟಿ ರಚಿತಾ ರಾಮ್‌ ಮಾಧ್ಯಮಗಳ ಮೂಲಕ ಖಡಕ್ ಉತ್ತರ ಕೂಡ ನೀಡಿದ್ದರು. ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಹಾಗೂ ನಟಿ ರಚಿತಾ ರಾಮ್ ತಿಕ್ಕಾಟ ಮತ್ತೆ ತಾರಕಕ್ಕೇರಿದ್ದು, ಈ ಎಲ್ಲಾ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ನಟಿ ರಚಿತಾ ರಾಮ್‌ ಅವರು, ನಾನು ಇಂಡಸ್ಟ್ರಿಯಲ್ಲಿ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಪ್ರತಿ ಸಿನಿಮಾಗೂ ಸಂಭಾವನೆ ಪಡೆಯುತ್ತಿದ್ದೇನೆ. ಚಿತ್ರರಂಗದಲ್ಲಿ ಸತತವಾಗಿ ಕೆಲಸ ಮಾಡಿಕೊಂಡು ಬಂದು, ಅವಶ್ಯಕತೆ ಇದ್ದಲ್ಲಿ ಮಾತ್ರ ಮಾತನಾಡುತ್ತೇನೆ. ನಾನು ಶೂಟಿಂಗ್​ನಲ್ಲಿ ಬ್ಯುಸಿ ಇರುತ್ತೇನೆ. ಶೂಟ್ ಇಲ್ಲ ಎಂದರೆ ಕುಟುಂಬದವರ ಜೊತೆ ಸಮಯ ಕಳೆಯುತ್ತೇನೆ. ‘ನನ್ನ ಸ್ಟಾಫ್​, ನನ್ನ ಮಾಧ್ಯಮದವರಿಗೆ ನಾನು ಏನು ಅಂತ ಗೊತ್ತಿದೆ. ನನ್ನ ಆಪ್ತರಿಗೆ ನನ್ನ ಬಗ್ಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಸ್ಪಾನ್ಸರ್ ಇದ್ದಿದ್ರೆ 12 ವರ್ಷ ಯಾಕೆ ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ? ಸ್ಪಾನ್ಸರ್ಸ್ ಇದ್ದಿದ್ದರೆ ಹಾಯಾಗಿ ವಿದೇಶಿ ಪ್ರವಾಸ ಮಾಡುತ್ತಿದ್ದೆ. ನನಗೆ ಕಷ್ಟ ಬಂದು ಎಲ್ಲಾ ಕಳೆದುಕೊಂಡರೂ ದೇವಸ್ಥಾನದಲ್ಲಿನ ಪ್ರಸಾದ ತಿಂದುಕೊಂಡು ಇರುತ್ತೇನೆ ಹೊರತು, ಯಾರ ಜೊತೆಯೂ ಹೋಗಿ ಇರೋದಿಲ್ಲ ಎಂದು ರಚಿತಾ ರಾಮ್‌ ಖಡಕ್‌ ಉತ್ತರವನ್ನ ನೀಡಿದ್ದಾರೆ. ಅವರು (ಜಗದೀಶ್) ವಯಸ್ಸಲ್ಲಿ ದೊಡ್ಡವರು. ನನಗೆ ಅವರನ್ನು ಅಗೌರವಿಸುವ ಅಗತ್ಯವಿಲ್ಲ. ಅವೆಲ್ಲ ಅಂತೆ-ಕಂತೆ. ಈ ಆರೋಪಕ್ಕೆ ಏನು ಮಾತನಾಡಬೇಕು ಎಂದು ಗೊತ್ತಿಲ್ಲ. ನಾನು ಅಂತ ಆಯಕ್ಟಿವಿಟಿಯಲ್ಲಿ ಭಾಗವಹಿಸಿದ್ರೆ ನನ್ನ ಲೈಫ್ ನನ್ನ ಇಷ್ಟ ಎಂದು ಹೇಳುತ್ತಿದ್ದೆ. ಇಲ್ಲವೇ ಈ ಬಗ್ಗೆ ಪ್ರಶ್ನಿಸಬೇಡಿ ಎನ್ನುತ್ತಿದ್ದೆ. ತಪ್ಪು ಮಾಡಿದ್ರೆ ಒಪ್ಪಿಕೊಳ್ಳುತ್ತೇನೆ. ನಾನು ತಪ್ಪು ಮಾಡಿಲ್ಲ. ಆರೋಪಗಳಿಗೆ ಉತ್ತರ ಸಿಕ್ಕಿತು ಎಂದುಕೊಳ್ಳುತ್ತೇನೆ ಎಂದು ರಚಿತಾ ರಾಮ್ ತಿಳಿಸಿದ್ದಾರೆ.