ಬೆಂಗಳೂರು: ಬಿಜೆಪಿ ಕಂಡ ಧೀಮಂತ ನಾಯಕ ಅನಂತ್ ಕುಮಾರ್ ಇನ್ನು ನೆನಪು ಮಾತ್ರ. ಇವರ ಸಾಧನೆಗಳು ಜನಮನದಲ್ಲಿ ಅಚ್ಚಳಿಯಾಗಿ ಉಳಿದಿದ್ದು ಕರ್ನಾಟಕಕ್ಕೆ ಯಾವ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ ಎಂಬುವುದನ್ನು ಒಮ್ಮೆ ಮೆಲುಕು ಹಾಕೋದು ಇವರ ಸಾಧನೆಗೆ ಸಲ್ಲಿಸುವ ಗೌರವವಾಗಿದೆ.
‘ನಮ್ಮ ಬೆಂಗಳೂರು ಮೆಟ್ರೊ’ ರೈಲು ಸೇವೆಗೆ ಚಾಲನೆ
ಬೆಂಗಳೂರನ್ನು ಸುವರ್ಣ ಚತುಷ್ಪಥ ಹೆದ್ದಾರಿ ಜಾಲಕ್ಕೆ ಬೆಸೆಯುವಂತೆ ಕಾಳಜಿ
ಏರೋಬ್ರಿಜ್, ಅಂತಾರಾಷ್ಟ್ರೀಯ ಸಂಪರ್ಕ ಕಲ್ಪಿಸುವ ಎಚ್‌ಎಎಲ್ ನಿಲ್ದಾಣದ ಗುಣಮಟ್ಟ ಹೆಚ್ಚಳ
ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆಯಡಿಯಲ್ಲಿ 43,000ಮನೆಗಳ ನಿರ್ಮಾಣ
ಬೆಂಗಳೂರು ನಗರಕ್ಕೆ ಕಾವೇರಿ ನೀರಿನ ಸರಬರಾಜು ಹೆಚ್ಚಳ
ಅದಮ್ಯ ಚೇತನಾ ಮೂಲಕ ಮಕ್ಕಳಿಗೆ ಸಹಾಯ
ರಾಜ್ಯದ ರೈತರಿಗೆ ವಿಶೇಷ ನೆರವು
2003 ರಿಂದ ಬೆಂಗಳೂರಿನ 72 ಸಾವಿರ ಹೆಚ್ಚಿನ ಮಕ್ಕಳಿಗೆ ಬಿಸಿಯೂಟ ಪೂರೈಕೆ
18 ಆರೋಗ್ಯ ಕೇಂದ್ರಗಳಲ್ಲಿ ಇ–ಕ್ಷೇಮಾ ಎಂಬ ಆರೋಗ್ಯ ತಪಾಸಣಾ ಘಟಕದ ಸ್ಥಾಪನೆ
೫೦ಕ್ಕೂ ಹೆಚ್ಚು ಉಚಿತ ನೇತ್ರ ಪರೀಕ್ಷೆ ಶಿಬಿರಗಳಿಗೆ ಚಾಲನೆ
ಬೆಂಗಳೂರಿನಲ್ಲಿ ಮಾಡರ್ನ್ ಆರ್ಟ್ ಗ್ಯಾಲರಿಯ ಸ್ಥಾಪನೆ
ಕರಗ, ಬಸವನಗುಡಿ ಕಡಲೆಕಾಯಿ ಪರಿಷೆ ಮತ್ತಿತ್ತರರ ಉತ್ಸವಕ್ಕೆ ಪ್ರಚಾರ
ಘನತ್ಯಾಜ್ಯ ನಿರ್ವಹಣೆ ಪ್ರಾಧಿಕಾರ ಸ್ಥಾಪನೆಗೆ ವಿವರವಾದ ಮಾರ್ಗಸೂಚಿಯ ಸಿದ್ಧತೆ
ವಿಕಲಚೇತನರ ಪಾಲಿಗೆ ದಾರಿದೀಪವಾಗಿದ್ದ ಅನಂತ ಕುಮಾರ್
ಸರ್ಕಾರಿ ಶಾಲೆಗಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸುವಿಕೆ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸತತ ಸಹಾಯ
ಅಂಬೇಂಡ್ಕರ್ ಕ್ರೀಡಾಂಗಣದ ನಿರ್ಮಾಣ
ಮಹಿಳಾ ಜಿಮ್ ಕೇಂದ್ರದ ಸ್ಥಾಪನೆ