ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಕುಮಾರಿ ಸಿಂಚನ ಲಕ್ಷ್ಮಿ ಕೋಡಂದೂರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ.-ಕಹಳೆ ನ್ಯೂಸ್
ಪೆರ್ನಾಜೆ: ಕರ್ನಾಟಕ ರಾಜ್ಯ ಡಾ .ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ವಿಶ್ವವಿದ್ಯಾನಿಲಯ ಮೈಸೂರ್ ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿದ್ವತ್ ಪರೀಕ್ಷೆಯ ಅಂತಿಮ ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾಳೆ.
ಇವರು ನಾಟ್ಯ ವಿದ್ಯಾಲಯ (ರೀ) ಕುಂಬಳೆ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಇವರ ಶಿಷ್ಯೆ ಹಾಗೂ ವಿಟ್ಲ ಐ ಟಿ ಐ ಸುಪ್ರಜೀತ್ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಕೆ ರಘುರಾಮ ಶಾಸ್ತ್ರಿ ಹಾಗೂ ಸ್ವರ ಸಿಂಚನ ಸಂಗೀತ ಶಾಲೆ ಶಿಕ್ಷಕಿ ಸವಿತಾ ಕೊಡಂದೂರು ಅವರ ಪುತ್ರಿ. ಡಾ .ಸಚಿನ್ ಸುಬ್ರಮಣ್ಯ ಕೊಡಂದೂರು ಅಣ್ಣನ ಪ್ರೋತ್ಸಾಹ , ಕುಮಾರ್ ಪೆರ್ನಾಜೆ ಸ್ವರ ಸಿಂಚನ ಕಲಾತಂಡದ ಅರಳು ಪ್ರತಿಭೆಯಾಗಿದ್ದು. ಭರತನಾಟ್ಯ ಸಂಗೀತಕ್ಕೂ ಸೈ. ಎನಿಸಿ ತನ್ನ ಕಲಾ ಪ್ರೌಡಿಮೇಯನ್ನು ಮೆರೆದಿದ್ದಾರೆ.
ಇವರು ವಿವೇಕಾನಂದ ಇಂಜಿನಿಯರಿAಗ್ ಕಾಲೇಜ್ ಅಂಡ್ ಟೆಕ್ನಾಲಜಿ ಫೈನಲ್ ಇಯರ್ಆ(BE) Data Science ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
2024ರ ನವರಾತ್ರಿಗೆ ಧರ್ಮಸ್ಥಳದಲ್ಲಿ ಸಂಗೀತ ಕಚೇರಿ ನೀಡಿದ್ದು ಇವಳ ಹೆಗ್ಗಳಿಕೆ.
ಅಲ್ಲದೆ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಿದ್ದಾರೆ .
ಇದೇ ಏಪ್ರಿಲ್ ತಿಂಗಳಲ್ಲಿ ಭರತನಾಟ್ಯ ರಂಗ ಪ್ರವೇಶವನ್ನು ನೀಡಲಿದ್ದಾಳೆ ಇವಳಿಗೆ ಈಗಾಗಲೇ ಪೆರ್ನಾಜೆ ಪ್ರಶಸ್ತಿ ,ಗಡಿನಾಡ ದ್ವನಿ ಪ್ರಶಸ್ತಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದೆ.