Friday, September 20, 2024
ಸುದ್ದಿ

ನವೆಂಬರ್ ಅಂತ್ಯದೊಳಗೆ ಮಂಗಳೂರು ವಿವಿಗೆ ನೂತನ ಕುಲಪತಿ ನೇಮಕ ನಡೆಯುವ ಸಾಧ್ಯತೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕ ನವೆಂಬರ್ ಅಂತ್ಯದ ಒಳಗೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಈ ಸಂಬಂಧ ಬೆಂಗಳೂರಿನ ಉನ್ನತ ಶಿಕ್ಷಣ ಆಡಳಿತ ಸೌಧದಲ್ಲಿ ನ.9 ಮತ್ತು 10ರಂದು ಆಯ್ಕೆ ಸಮಿತಿ ಸಭೆ ನಡೆದಿದೆ.

ಮುಂದಿನ ಹಾಗೂ ಅಂತಿಮ ಸಭೆ ನ.23ಕ್ಕೆ ಮುಂದೂಡಲಾಗಿದೆ. ಅಂದು ನೂತನ ಕುಲಪತಿಯ ಹೆಸರು ಅಂತಿಮಗೊಳ್ಳಲಿದೆ. ಆ ಬಳಿಕ ಮುಖ್ಯಮಂತ್ರಿಗೆ ಸಲ್ಲಿಕೆಯಾಗಲಿದೆ. ಅಂತಿಮವಾಗಿ ರಾಜ್ಯಪಾಲರು ನೇಮಕ ಆದೇಶ ಹೊರಡಿಸಲಿದ್ದಾರೆ ಎಂದು ವಿವಿ ಮೂಲಗಳು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದಿನ ಕುಲಪತಿ ಕೆ.ಬೈರಪ್ಪ ಅವರ ಆಡಳಿತ ಅವಧಿ 2018 ಜೂನ್‌ನಲ್ಲಿ ಪೂರ್ಣಗೊಂಡಿತ್ತು. ಆ ಬಳಿಕ ಸೇವಾ ಹಿರಿತನದ ಆಧಾರದಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಕಿಶೋರ್ ಕುಮಾರ್ ನ.7ರ ತನಕ ಹಂಗಾಮಿ ಕುಲಪತಿಯಾಗಿದ್ದರು.

ಜಾಹೀರಾತು

ಪ್ರಸ್ತುತ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಈಶ್ವರ ಪಿ. ಹಂಗಾಮಿ ಕುಲಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.