Monday, January 13, 2025
ದಕ್ಷಿಣ ಕನ್ನಡಮಂಗಳೂರುಮುಂಬೈಸಿನಿಮಾಸುದ್ದಿ

ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ” ಜೈ.. ” ತುಳು ಸಿನಿಮಾದಲ್ಲಿ ಮೊದಲ ಬಾರಿಗೆ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟನೆ..!! – ಕಹಳೆ ನ್ಯೂಸ್

ಜೈ.. ರಾಕ್ ಸ್ಟಾರ್ ರೂಪೇಶ್ ಶೆಟ್ಟಿಯವರ ಅಪ್ ಕಮಿಂಗ್ ತುಳು ಸಿನಿಮಾ..

ಟೈಟಲ್ ಮೂಲಕವೇ ಭಾರಿ ಸದ್ದು ಮಾಡ್ತಾ ಇರುವ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಖ್ಯಾತ ಬಾಲಿವುಡ್ ಆಕ್ಟರ್ ಸುನೀಲ್ ಶೆಟ್ಟಿ ನಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಸಿನಿಮಾದ ಶೂಟಿಂಗ್ ನಡಿತಾ ಇದ್ದು ಸಿನಿಮಾ ಹೇಗಿರ್ಬೋದು..? ಯಾವಾಗ ರಿಲೀಸ್ ಅನ್ನೋ ಕುತೂಹಲ ಸಿನಿ ಪ್ರೇಕ್ಷಕರದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಜೈ’ ಸಿನಿಮಾವು ಆರ್‌ಎಸ್ ಸಿನಿಮಾಸ್, ಶೂಲಿನ್ ಫಿಲ್ಡ್ ಮತ್ತು ಮುಗೋಡಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿದೆ.

‘ಗಿರ್ಗಿಟ್’, ‘ಸರ್ಕಸ್’ ಮತ್ತು ‘ಗಮ್ಮಲ್‌’ನಂತಹ ಜನಪ್ರಿಯ ತುಳು ಚಲನಚಿತ್ರಗಳನ್ನು ರಚಿಸಿದ ಅದೇ ತಂಡ ಇದೀಗ ಜೈ ಚಿತ್ರದಲ್ಲಿ ತೊಡಗಿದೆ. ರೂಪೇಶ್ ಶೆಟ್ಟಿ ನಿರ್ದೇಶಕರಾಗಿದ್ದು, ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಲಾಯ್ ವ್ಯಾಲೆಂಟೈನ್ ಸಲ್ದಾನಾ ಸಂಗೀತವಿದ್ದು, ವಿನುತ್ ಕೆ ಕ್ಯಾಮರಾ ಕೈಚಳಕವಿದೆ.

ಚಿತ್ರತಂಡವು ಈಗಾಗಲೇ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದು, ವಿಭಿನ್ನವಾಗಿ ಮೂಡಿಬಂದಿದೆ. ರಾಜಕೀಯ ಕತೆಯನ್ನು ಒಳಗೊಂಡಿರುವ ಚಿತ್ರದಲ್ಲಿ ಮೊದಲ ಬಾರಿಗೆ ಖ್ಯಾತ ನಟ ದೇವದಾಸ್ ಕಾಪಿಕಾಡ್ ಗಂಭೀರ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ರೂಪೇಶ್ ಶೆಟ್ಟಿ, ದೇವದಾಸ್ ಕಾಪಿಕಾಡ್, ಅರವಿಂದ ಬೋಳಾ‌ರ್ ಜತೆಗೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ. ಚಿತ್ರದ ನಾಯಕಿಯ ಬಗ್ಗೆ ಇದುವರೆಗೆ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಒಟ್ಟಿನಲ್ಲಿ ಭಿನ್ನ ಪರಿಕಲ್ಪನೆಯೊಂದಿಗೆ ತಯಾರಾಗುತ್ತಿರುವ ಜೈ ಸಿನಿಮಾ ತುಳು ಚಿತ್ರಪ್ರೇಮಿಗಳಲ್ಲಿ ಈಗಾಗಲೇ ನಿರೀಕ್ಷೆ ಹುಟ್ಟು ಹಾಕಿದೆ.