Monday, January 13, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ- ಜಾಗೃತಿ ಸಭೆ ಸಂಪನ್ನ : ಹಿಂದೂಗಳ ನೂರಾರು ಸಮಸ್ಯೆಗೆ ಹಿಂದೂ ರಾಷ್ಟ್ರ ಒಂದೇ ಉಪಾಯ ! – ಶ್ರೀ. ಪ್ರಣವ ಮಲ್ಯ, ಹಿಂದೂ ಜನಜಾಗೃತಿ ಸಮಿತಿ-ಕಹಳೆ ನ್ಯೂಸ್

ವಿಟ್ಲ : ದೇಶವನ್ನು ಆಳಿದ ಮುಘಲರು, ಬ್ರಿಟಿಷರು , ಪೋರ್ಚುಗೀಸರು, ಪ್ರತಿಯೊಬ್ಬರೂ ಧರ್ಮವನ್ನು ಗುರಿಯಾಗಿಸಿ ಹಿಂದೂ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರು. ಸದ್ಯದ ಸ್ಥಿತಿಯಲ್ಲಿಯೂ ಕೂಡ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ವಕ್ಫ್ ಕಾಯ್ದೆ, ಲವ್ ಜಿಹಾದ್ ನಂತಹ ಸಮಸ್ಯೆ ಹಿಂದೂಗಳು ಎದುರಿಸಬೇಕಾಗಿದೆ. ಧರ್ಮ ಉಳಿದರೆ ರಾಷ್ಟ್ರ ಉಳಿಯುವುದು, ರಾಷ್ಟ್ರ ಉಳಿದರೆ ನಾವು ಬದುಕಿರಲು ಸಾಧ್ಯ ಇದನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ. ಹಿಂದೂ ರಾಷ್ಟ್ರ ಸಧ್ಯದ ಕಾಲದ ಅವಶ್ಯಕತೆಯಾಗಿದೆ. ಹಿಂದೂ ರಾಷ್ಟ್ರ ನಮಗೆ ಯಾರೂ ಉಡುಗೊರೆಯಾಗಿ ಕೊಡುವುದಿಲ್ಲ. ಇದಕ್ಕಾಗಿ ಸಂಘರ್ಷ ಮಾಡಬೇಕಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಸರ್ವಸ್ವವನ್ನು ತ್ಯಾಗ ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಬಹುಸಂಖ್ಯಾತ ಇರುವ ಹಿಂದೂಗಳು ಶಿವಾಜಿಯವರನ್ನು ಆದರ್ಶ ಇಟ್ಟುಕೊಂಡು ಪ್ರತಿದಿನ ಒಂದು ಗಂಟೆಯಾದರೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ತನು, ಮನ, ಧನದ ತ್ಯಾಗ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಇವರು ಕರೆ ನೀಡಿದರು.

12 ಜನವರಿ 2025, ರವಿವಾರ ದಂದು ಶ್ರೀ ರಾಮ ಮಂದಿರ ಬೊಬ್ಬೆಕೇರಿ, ಮಂಗಳೂರು ಮುಖ್ಯ ರಸ್ತೆ, ವಿಟ್ಲದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ಸಂಪನ್ನವಾಯಿತು. ಕಾರ್ಯಕ್ರಮವನ್ನು ದೀಪಪ್ರಜ್ವಲನೆಯ ಮೂಲಕ ಪ್ರಾರಂಭಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಶ್ರೀ. ವಿವೇಕ್ ಪೈ ಮಾತನಾಡಿ ಸಮಿತಿಯ ಅವಿರತ ಪ್ರಯತ್ನಕ್ಕೆ ಸಿಕ್ಕಿದ ಯಶಸ್ಸನ್ನು ಹೇಳಿದರು. ಸುಮಾರು 230ಕ್ಕೂ ಅಧಿಕ ಹಿಂದೂ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ವಿಟ್ಲದ ಶ್ರೀ ಸುಭಾಷ್ ನಾಯಕ್ , ಶ್ರೀ ರಾಧಾಕೃಷ್ಣ ಚೆಲ್ಲಡ್ಕ, ಶ್ರೀ ಅಶೋಕ್ ಶೆಟ್ಟಿ , ಪುರೋಹಿತ ರಜತ್ ಭಟ್ ಇವರು ಉಪಸ್ಥಿತರಿದ್ದರು. ಸನಾತನ ಸಂಸ್ಥೆಯ ಗ್ರಂಥ ಪ್ರದರ್ಶನ, ಸಾತ್ವಿಕ ವಸ್ತುಗಳ ಮಳಿಗೆ, ಧರ್ಮಶಿಕ್ಷಣದ ಫಲಕ ಪ್ರದರ್ಶನವು ಉಪಸ್ಥಿತರ ಗಮನ ಸೆಳೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತವನ್ನು ವಿಶ್ವಗುರು ಮಾಡಲು, ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸಲು ಹಿಂದೂ ಸಂಘಟನೆಯಿಂದ ಸಾಧ್ಯ ! – ನ್ಯಾಯವಾದಿ ಶ್ರೀ ಕೃಷ್ಣಮೂರ್ತಿ
ರಾಷ್ಟ್ರ ರಕ್ಷಣೆ, ಧರ್ಮಜಾಗೃತಿ, ಸಂಘಟನೆಯಿಂದ ಸಾಧ್ಯ . ಸಂಘಟನೆಯನ್ನು ಮಾಡಿ ನಮ್ಮ ಸುತ್ತಲಿನ ಜನರಿಗೆ ಆಧಾರವೆನಿಸುವುದು ಮಹತ್ವದ್ದಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ಲವ್ ಜಿಹಾದ್ ನಂತಹ ಕೃತ್ಯಗಳ ಜಾಗೃತಿಯನ್ನು ಮೂಡಿಸುವುದು, ಗೋರಕ್ಷಣೆ, ಧರ್ಮಶಿಕ್ಷಣ, ಸಾಮೂಹಿಕ ಭಜನೆ ಇತ್ಯಾದಿಗಳನ್ನು ಸಂಘಟನೆಯು ನೇತೃತ್ವವನ್ನು ತೆಗೆದುಕೊಂಡು ಕಾರ್ಯವನ್ನು ಮಾಡಬೇಕಾಗಿದೆ. ಬಾಂಗ್ಲಾದೇಶದ ಪರಿಸ್ಥಿತಿ ನಮಗೆ ಬರಬಾರದಾದರೆ, ಹಿಂದೂ ಬಾಂಧವರು ಸಂಘಟಿತರಾಗಬೇಕೆಂದು ನ್ಯಾಯವಾದಿ ಶ್ರೀ. ಕೃಷ್ಣಮೂರ್ತಿ ಇವರು ಕರೆ ನೀಡಿದವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಧರ್ಮಗ್ಲಾನಿಯ ಕಾಲದಲ್ಲಿ ಹಿಂದುಗಳು ಧರ್ಮಶಿಕ್ಷಣ ಪಡೆದು ಧರ್ಮಪಾಲನೆಯನ್ನು ಮಾಡಿ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಿಕೊಳ್ಳೂಣ – ಸೌ. ಲಕ್ಷ್ಮಿ ಪೈ, ಸನಾತನ ಸಂಸ್ಥೆ
ಸನಾತನ ಸಂಸ್ಥೆಯ ವಕ್ತಾರರಾದ ಸೌ. ಲಕ್ಷ್ಮಿ ಪೈಯವರು ತಮ್ಮ ಪ್ರವಚನದಲ್ಲಿ ಹಿಂದೂ ಧರ್ಮದಲ್ಲಿ ಹೇಳಲಾದ ಪ್ರತಿಯೊಂದು ಆಚರಣೆಗಳ ಹಿಂದೆ ವಿಜ್ಞಾನವಿದೆ, ಅಧ್ಯಾತ್ಮವಿದೆ ಮತ್ತು ಈಶ್ವರನ ಅಧಿಷ್ಠಾನವಿದೆ, ಎಲ್ಲರಿಗೂ ಮಂಗಳವಾಗಲಿ ಎಂಬ ಆಶಯ ಇದೆ ಎಂದು ಸನಾತನ ಧರ್ಮದ ವೈಜ್ಞಾನಿಕತೆಯ ಬಗ್ಗೆ ಹಾಗೂ ಶ್ರೇಷ್ಠತ್ವದ ಬಗ್ಗೆ ವಿವರಿಸಿದರು. ವರ್ತಮಾನ ಕಾಲದಲ್ಲಿ ಹಿಂದೂಗಳು ಧರ್ಮದಿಂದ ದೂರ ಹೋಗಿರುವುದರಿಂದಲೇ ಅನೇಕ ಸಂಕಟಗಳನ್ನು ಮತ್ತು ಆಘಾತಗಳನ್ನು ಎದುರಿಸಬೇಕಾಗಿದೆ. ನಮ್ಮ ಹೆಣ್ಣು ಮಕ್ಕಳ ಕಥೆ ‘ಕೇರಳ ಸ್ಟೋರಿ ‘ ಹಾಗೆ ಆಗಬಾರದಾದರೆ ಹೆಣ್ಣುಮಕ್ಕಳಿಗೆ ಧರ್ಮ ಶಿಕ್ಷಣವನ್ನು ನೀಡಿ, ಧರ್ಮ ಜಾಗೃತಿಯನ್ನು ಮೂಡಿಸಬೇಕಾಗಿದೆ. ನಾವೆಲ್ಲರೂ ಈ ಕ್ಷಣದಿಂದ ಧರ್ಮಪಾಲನೆಯನ್ನು ಮಾಡಿ ಸಾಧನೆಯನ್ನು ಪ್ರಾರಂಭಿಸಿ ಸನಾತನ ಧರ್ಮರಕ್ಷಣೆಯ ದಿವ್ಯ ಸಂಕಲ್ಪ ಮಾಡೋಣ ಎಂದು ಉಪಸ್ಥಿತರಿಗೆ ಕರೆ ನೀಡಿದರು.