Recent Posts

Monday, January 13, 2025
ಬೆಂಗಳೂರುಸುದ್ದಿ

ಹಸುಗಳ ಕೆಚ್ಚಲು ಕೊಯ್ದ ಜಿಹಾದಿಗಳನ್ನು ಕೂಡಲೇ ಬಂಧಿಸಿ ! – ಹಿಂದೂ ಜನಜಾಗೃತಿ ಸಮಿತಿ -ಕಹಳೆ ನ್ಯೂಸ್

ಬೆಂಳೂರು: ಗೋವಿಗೆ ಭಾರತದಲ್ಲಿ ಪೂಜನೀಯ ಸ್ಥಾನ ನೀಡಲಾಗಿದೆ. ಸಂಪೂರ್ಣ ಹಿಂದೂ ಸಮಾಜವು ಗೋವನ್ನು ಮಾತೆಯ ರೂಪದಲ್ಲಿ ನಿತ್ಯ ಪೂಜಿಸುತ್ತಾರೆ. ಹೀಗಿರುವಾಗ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರಲೆಂದೇ ಚಾಮರಾಜಪೇಟೆಯಲ್ಲಿ ಜಿಹಾದಿಗಳು ರಾತ್ರೋರಾತ್ರಿ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ಯುವ ಕುಕೃತ್ಯ ಎಸಗಿದ್ದಾರೆ. ಇದೊಂದು ಭಯೋತ್ಪಾದನೆ ಕೃತ್ಯವೇ ಆಗಿದೆ. ಇದನ್ನು ಸಂಪೂರ್ಣ ಹಿಂದೂ ಸಮಾಜ ಖಂಡಿಸುತ್ತದೆ.

ತನ್ನನ್ನು ಸೆಕ್ಯುಲರ್ ಹೇಳಿಕೊಳ್ಳುವ ರಾಜ್ಯ ಕಾಂಗ್ರಸ್ ಆಡಳಿತದಲ್ಲಿ ನಿರಂತರವಾಗಿ ಹಿಂದೂ ಸಮಾಜದ ಮೇಲೆ ಈ ರೀತಿಯ ಆಘಾತಗಳು ನಡೆಯುತ್ತಿವೆ. ಪ್ರಾಣಿಗಳ ಮೇಲೆ ಹಲ್ಲೆಯಾದಾಗ ಕೂಡಲೇ ಬೊಬ್ಬೆ ಹಾಕುವ Pಇಖಿಂ (ಪ್ರಾಣಿ ದಯಾ ಸಂಘ) ಈ ಘಟನೆಯ ಬಗ್ಗೆ ಮೌನವಹಿಸಿದೆ, ಇದೊಂದು ದುರ್ದೈವದ ಸಂಗತಿಯಾಗಿದೆ. ಹಿಂದೂ ಸಮಾಜವು ಇನ್ನು ಇಂತಹ ದಾಳಿಗಳನ್ನು ನೋಡಿ ಸುಮ್ಮನೆ ಕೂರುವುದಿಲ್ಲ. ರಾಜ್ಯ ಸರಕಾರವು ಕೂಡಲೇ ಜಿಹಾದಿಗಳ ಬಂಧನ ಮಾಡಬೇಕೆಂದು ಹಿಂದೂ ಜನಜಾಗಸಮಿತಿ ಆಗ್ರಹಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು