ಉತ್ಸಾಯಿ ಕಲಾವಿದರು ಕುಪ್ಪೆ ಪದವು ಇವರು ಅಭಿನಯಿಸಲಿರುವ ದಿನಕರ ಭಂಡಾರಿ ಕನಜಾರು ವಿರಚಿತ “ದಾ ಯೆ ಇಂಚ ಮಲ್ತ” ನಾಟಕಕ್ಕೆ ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದಲ್ಲಿ ಶುಭ ಮುಹೂರ್ತ -ಕಹಳೆ ನ್ಯೂಸ್
ಮಂಗಳೂರು: ಶ್ರೀ ದುರ್ಗೆಶ್ವರಿ ದೇವಿ ದೇವಸ್ಥಾನ ಕುಪ್ಪೆಪದವು. ಇದರ ಜಾತ್ರೆ ಉತ್ಸವ ದ ಪ್ರಯುಕ್ತ ಉತ್ಸಾಹಿ ಕಲಾವಿದರು ಕುಪ್ಪೆಪದವು ಅಭಿನಯಿ ಸಲಿರುವ ನೂತನ ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿನಕರ ಭಂಡಾರಿ ಕಣಜಾರು ವಿರಚಿತ “ದಾಯೆ ಇಂಚ ಮಲ್ತ” ಇದರ ಶುಭ ಮುಹೂರ್ತ ದುರ್ಗೆಶ್ವರಿ ಅಮ್ಮನ ಸನ್ನಿದಿಯಲ್ಲಿ ಪ್ರಧಾನ ಅರ್ಚಕರಾದ ಶ್ರೀ ಗುರುಪ್ರಸಾದ್ ಕಾರಂತ್ ನೆರವೇರಿಸಿದರು.
ಉತ್ಸಾಹಿ ಕಲಾ ತಂಡದ ಸ್ಥಾಪಕ ಅಧ್ಯಕ್ಷ ವಿಜಯ ಸುವರ್ಣ ಬಳ್ಳಾಜೆ, ಸ್ಥಾಪಕ ಸದಸ್ಯ ರಂಗ ಭೂಮಿ ಕಲಾವಿದ ರವಿ ಅಟ್ಟೆಪದವು, ಮಹಾವೀರ ಕೋ ಆಪರೇಟಿವ್ ಸೊಸೈಟಿ ನ ಮ್ಯಾನೇಜರ್ ಹರೀಶ್ ಸುವರ್ಣ ಅಂಬೆಲೊಟ್ಟು, ರಾಜಲಕ್ಷ್ಮಿ ಫ್ರೆಂಡ್ಸ್ ಕ್ಲಬ್ ಬೊಳಿಯ ಇದರ ಕೋಶಾಧಿಕಾರಿ ಸಂತೋಷ್ ಬೊಳಿಯ, ರಾಮಕೃಷ್ಣ ಭಜನಾ ಮಂದಿರ ಕುಪ್ಪೆಪದವು ಇದರ ಚಂದ್ರಶೇಖರ ದೇವಾಡಿಗ, ಶ್ರೀ ಸತ್ಯ ಸಾರಮಾನಿ ಸೇವಾ ಸಮಿತಿ ಬಳ್ಳಾಜೆ ಕುಲವೂರು ಇದರ ಪ್ರಮುಖರಾದ ಈಶ್ವರ್ ಅಟ್ಟೆಪದವು ಹಾಗೂ ತಂಡದ ಕಲಾವಿದರಾದ ಗಣೇಶ್ ಪಾಕಜೆ, ಚಿದಾನಂದ ಕುಪ್ಪೆಪದವು, ಅಶೋಕ್. ಕೆ ಉಪಸ್ಥಿತರಿದ್ದರು.