Saturday, January 18, 2025
ಉಡುಪಿಮೂಡಬಿದಿರೆಸುದ್ದಿ

ಎಕ್ಸಲೆಂಟ್ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ -ಕಹಳೆ ನ್ಯೂಸ್

ಮೂಡುಬಿದಿರೆ : ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಯುವಪೀಳಿಗೆಗೆ ದಾರಿದೀಪವಾಗಬೇಕು. ತನ್ನ ಯೌವ್ವನದಲ್ಲಿ ರಾಷ್ಟ್ರಿಯ ಚಿಂತನೆಯನ್ನು ಮೈಗೂಡಿಸಿಕೊಂಡು ಯುವ ಸಮೂಹಕ್ಕೆ ಸ್ಫೂರ್ತಿಯ ಸೆಳೆಯಾದ ವಿವೇಕಾನಂದರ ಜೀವನ ನಿಜಕ್ಕೂ ಸಾರ್ಥಕ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಬಿ.ಪಿ ಸಂಪತ್ ಕುಮಾರ್ ಅಭಿಪ್ರಾಯಪಟ್ಟರು. ಎಕ್ಸಲೆಂಟ್ ಸಿಬಿಎಸ್ಇ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅವರು ವಿವೇಕಾನಂದರು ಭಾರತ ದೇಶ ಕಂಡ ಮಹಾನ್ ಯುಗಪುರುಷ, ಸಂತ ಮತ್ತು ಬೌದ್ಧಿಕ ರಾಯಭಾರಿ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ತಾಯಿ ಭಾರತೀಯ ಮಣ್ಣಿನ ಪ್ರತಿ ಕಣಕಣದಲ್ಲೂ ಪವಿತ್ರತೆಯನ್ನು ಕಂಡ
ಕ್ರಾAತಿಕಾರಿ ಸಂತ ಸ್ವಾಮಿ ವಿವೇಕಾನಂದರು ಎಂದು ತಿಳಿಸಿದರು. ಅನೇಕ ಸ್ವಾತಂತ್ರ‍್ಯ ಹೋರಾಟಗಾರರು ಸ್ವಾಮಿ ವಿವೇಕಾನಂದರ ಆದರ್ಶಗಳಿಂದ ಪ್ರೇರಣೆ ಪಡೆದಿದ್ದರು. ತಮ್ಮ ಅಲ್ಪ ಜೀವಿತಾವಧಿಯಲ್ಲಿ ಭಾರತೀಯರ ಚಿಂತನೆಗೆ ಹೊಸ ರೂಪಕೊಟ್ಟ ಮಹಾನ್ ಚೇತನ ಸ್ವಾಮಿ ವಿವೇಕಾನಂದರು. ಪ್ರಸ್ತುತ ಕಾಲದಲ್ಲಿ ಸ್ವಾಮೀಜಿಯವರ ಬದುಕು ಪ್ರತಿಯೊಬ್ಬ ವ್ಯಕ್ತಿಗೂ ಅನುಕರಣೀಯವಾದದ್ದು ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಸುರೇಶ ಮತ್ತು ಶಿಕ್ಷಣ ಸಂಯೋಜಕ ಶ್ರೀಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಿಯಾ ನಿರೂಪಿಸಿ, ಶ್ರೇಯ ಸ್ವಾಗತಿಸಿ, ಮೊಹಮ್ಮದ್ ಐಹಾನ್ ವಂದಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಸಾರುವ ರೂಪಕ ಮತ್ತು ನೃತ್ಯವನ್ನು ಪ್ರದರ್ಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು