Recent Posts

Monday, January 20, 2025
ಸುದ್ದಿ

ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ವಿರುದ್ಧ ಕೇಸ್ ಇದು ಕಹಳೆ ನ್ಯೂಸ್ ಇಂಪ್ಯಾಕ್ಟ್

ಮಂಗಳೂರು ನವೆಂಬರ್ 11 : ಕೇಂದ್ರ ಸಚಿವ ಅನಂತ ಕುಮಾರ್ ನಿಧನಕ್ಕೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರಹದ ಹಿನ್ನಲೆಯಲ್ಲಿ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ವಿರುದ್ದ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಹಿನ್ನಲೆಯಲ್ಲಿ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ನಲ್ಲಿ ಸಂಭ್ರಮಿಸಿ ಬರಹಗಳನ್ನು ಬರೆದಿದ್ದರು. ಈ ಕುರಿತಂತೆ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ, ಕಹಳೆ ನ್ಯೂಸ್ ಸಂಪೂರ್ಣ ವಿವರ ಸಹಿತ ವರದಿಯನ್ನು ಪ್ರಕಟಿಸಿತ್ತು, ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳ ಗಮನಕ್ಕೂ ತಂದಿತ್ತು, ಅಲ್ಲದೆ, ಕಹಳೆ ನ್ಯೂಸ್ ಬಿತ್ತರವಾಗುತ್ತಿದ್ದಂತೆ ಉಳಿದ ಮಾಧ್ಯಮಗಳು ನ್ಯೂಸ್ ಬಿತ್ತರ ಮಾಡಿದ್ದರು, ಇದರ ಫಲಶ್ರುತಿ ಈಗ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆಯಲ್ಲಿ ಬಿತ್ತರವಾದ ವರದಿ : 

” *ಸಾವಿನಲ್ಲು ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಪೇಜ್, ಇದೇನಾ ಸಂಸ್ಕøತಿ..? “ಇದೇನಾ ಸಭ್ಯತೆ” – ಕಹಳೆ ನ್ಯೂಸ್*

*ಮಂಗಳೂರು ಪೋಲಿಸರೇ ಎಲ್ಲಿದ್ದೀರಿ ?*

https://youtu.be/eQ03kIDzwCQ

 

ಈ ಹಿನ್ನಲೆಯಲ್ಲಿ ಮಂಗಳೂರು ಮುಸ್ಲಿಂ ಫೇಸ್ಬುಕ್ ಪೇಜ್ ವಿರುದ್ಧ ಮಂಗಳೂರು ಪಾಂಡೇಶ್ವರ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿದ್ದು, ಐಟಿ ಆಕ್ಟ್ ಅಡಿಯೂ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಿದ್ದಾರೆ.