ಉಡುಪಿ : ಜ್ಯುವೆಲ್ಲರಿ ಸಿಬ್ಬಂದಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಂಕನಿಡಿಯೂರು ಗ್ರಾಮದ ಗರಡಿಮಜಲು ದೇವಿಕಟ್ಟೆ ಎಂಬಲ್ಲಿ ನಡೆದಿದೆ.
ಉಡುಪಿಯ ಆಭರಣ ಜುವೆಲ್ಲರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಡಾನಿಡಿಯೂರು ಗ್ರಾಮದ ರಮೇಶ ಶೇರಿಗಾರ್ (37) ಎಂಬವರು ಜ.12ರಂದು ರಾತ್ರಿ ಮನೆಯಲ್ಲಿ ನನಗೆ ಹೆದರಿಕೆ ಆಗುತ್ತದೆ, ಈಗ ಬರುತ್ತೇನೆಂದು ಹೇಳಿ ತನ್ನ ಮೊಬೈಲ್‌ನ್ನು ತಂಗಿಗೆ ನೀಡಿ ಮನೆಯಿಂದ ಹೋಗಿದ್ದರು. ಆ ಬಳಿಕ ರಮೇಶ್ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದರು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಜ.14ರಂದು ಸಂಜೆ 7 ಗಂಟೆಗೆ ಸುಮಾರಿಗೆ ಗರಡಿಮಜಲು ದೇವಿಕಟ್ಟೆಯ ಹಿಂಬದಿಯ ತೋಟದಲ್ಲಿರುವ ಬಾವಿಯ ಒಳಗೆ ರಮೇಶ ಅವರ ಮೃತದೇಹವು ಪತ್ತೆಯಾಗಿದೆ. ಮೃತದೇಹವನ್ನು ರಾತ್ರಿ ವೇಳೆಯೇ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ಈಶ್ವರ್ ಮಲ್ಪೆ ಮೇಲಕ್ಕೆತ್ತಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲು ಸಹಕರಿಸಿದರು.
ಮೃತರು ಇವರು ಮಾನಸಿಕ ಖಿನ್ನತೆಯಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.