Saturday, January 18, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಕೆಮ್ಮಾಯಿ: ಅಶ್ವತ್ಥ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಶನೈಶ್ಚರ ಗೃಹವೃತ ಕಲ್ಪೋಕ್ತ ಪೂಜೆ -ಕಹಳೆ ನ್ಯೂಸ್

ಕೆಮ್ಮಾಯಿ: ಶ್ರೀ ವಿಷ್ಣು ಯುವಕ ಮಂಡಲ ರಿ. ಕೆಮ್ಮಾಯಿ ಇದರ ವತಿಯಿಂದ 28ನೇ ವರ್ಷದ ಅಶ್ವತ್ಥ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಶನೈಶ್ಚರ ಗೃಹವೃತ ಕಲ್ಪೋಕ್ತ ಪೂಜೆ ಇಂದು ನಡೆಯಿತು.

ಸಂಜೆ ಶ್ರೀ ವಿಷ್ಣು ಯುವಕ ಮಂಡಲ ರಿ ಇದರ 28ನೇ ವಾರ್ಷಿಕೋತ್ಸವದ ಅಂಗವಾಗಿ ಸಂಜೆ 7ರಿಂದ 8ರವರೆಗೆ ಭಜನೆ ಹಾಗೂ ಕುಣಿತ ಭಜನೆ ನಡೆಯಲಿದೆ. ರಾತ್ರಿ 8ರಿಂದ ಸಭಾ ಕರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಚತೆಯನ್ನ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದಾರೆ. ಸಮರ್ಥ ಜನ ಸೇವಾ ಟ್ರಸ್ಟ್ ಪುಣ್ಚಪ್ಪಾಡಿ ಇದರ ಅಧ್ಯಕ್ಷ ಗಿರಿಶಂಕರ ಸುಲಾಯ ಧಾರ್ಮಿಕ ಉಪಾನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಠಾಣಾಧಿಕಾರಿ ಆಚಿಜನೇಯ ರೆಡ್ಡಿ, ಪೌರಾಯುಕ್ತ ಮಧು ಮನೋಹರ್, ಮಹಾವೀರ ಮೆಡಿಕಲ್ ಸೆಂಟರ್‌ನ ಡಾ ಅಶೋಕ್ ಪಡಿವಾಳ್ ಭಾಗವಹಿಸಲಿದ್ದಾರೆ. ಇನ್ನು ಮುಖ್ಯೋಪಾದ್ಯಾಯಿನಿ ಹಾಗೂ ದ.ಕ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಯಶೋಧಾ ಅವರಿಗೆ ಹಾಗೂ ಈಶ ವಿದ್ಯಾಲಯದ ಸಂಚಾಲಕರಾದ ಡಾ ಎಂ ಗೋಪಾಲಕೃಷ್ಣ ಅವರಿಗೆ ಸನ್ಮಾನ ಕಾರ್ಯಕ್ರಮ ಜೊತೆಗೆ ಕ್ರೀಡೆಯಲ್ಲಿ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಗಂಟೆಯಿAದ ಶಾರದಾ ಕಲಾ ಆರ್ಟ್ಸ್ ರಿ ಮಂಜೇಶ್ವರ ಇವರಿಂದ ಕಥೆ ಎಡ್ಡೆ ಉಂಡು ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು