ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾ ಮೇಲೆ ದುಷ್ಕರ್ಮಿಗಳು ಚಾಕು ಇರಿದಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ.
ಮುಂಬೈನ ಬಾಂದ್ರಾದಲ್ಲಿ ಸೈಫ್ ಅಲಿ ಖಾನ್ ಮೇಲೆ ತಡರಾತ್ರಿ 2 ಗಂಟೆಗೆ ದಾಳಿ ನಡೆದಿದೆ. ದರೋಡೆಗೆ ಬಂದಿದ್ದ ಕಿಡಿಗೇಡಿಗಳಿಂದ ಈ ಕೃತ್ಯ ಜರುಗಿದೆ. ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದು, ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸೈಫ್ ಅಲಿ ಖಾನ್ ಅವರ ಮೇಲೆ ಆರಕ್ಕೂ ಹೆಚ್ಚು ಕಡೆಗಳಲ್ಲಿ ಗಾಯಗಳಾಗಿವೆ. ಸದ್ಯ ಅವರ ಸ್ಥೀತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು . ಹಲವು ಗಂಟೆಗಳ ಕಾಲ ಸರ್ಜರಿ ನಡೆಸಲಾಗಿದೆ. ಸರ್ಜರಿ ವೇಳೆ ಸೈಫ್ ಅಲಿಖಾನ್ ದೇಹದಲ್ಲಿ ಚಾಕುವಿನ ಚೂರು ಪತ್ತೆ ಆಗಿದೆ . ಕಳ್ಳ ಚಾಕು ಇರಿದಾಗ ಅದರ ತುಂಡು ಸೈಫ್ ದೇಹದಲ್ಲಿ ಉಳಿದುಕೊಂಡಿತ್ತು. ಅದನ್ನು ವೈದ್ಯರು ಹೊರತೆಗೆದಿದ್ದಾರೆ. ಸೈಫ್‌ಗೆ ಕಾಸ್ಮೆಟಿಕ್ ಸರ್ಜರಿ ನಡೆಸಲಾಗಿದೆ.
ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣದಲ್ಲಿ ಮನೆಯಲ್ಲಿ ಕೆಲಸದವರ ಮೇಲೆ ಅನುಮಾನ ಮೂಡಿದೆ. ಇವರ ಮನೆಗೆ ಎರಡು ಗೇಟ್‌ಗಳಿವೆ. 4 ಜನ ಗಾರ್ಡ್ಗಳು ಕೆಲಸ ಮಾಡುತ್ತಿದ್ದಾರೆ. ಆದರು ಕಳ್ಳ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಮನೆಯಲ್ಲಿ ಇರುವ ಯಾರಾದರೂ ಸಹಾಯ ಮಾಡಿದರೇ ಎನ್ನುವ ಪ್ರಶ್ನೆಯೂ ಮೂಡಿದೆ. ಪ್ರಕರಣದ ತನಿಖೆಗೆ ಮುಂಬೈ ಪೊಲೀಸರು 7 ತಂಡ ರಚಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.