Saturday, January 18, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಶ್ರೀರಾಮ ಆಂಗ್ಲಮಾಧ್ಯಮ ಶಾಲಾ ಕಛೇರಿ ವಿಕ್ರಮಾದಿತ್ಯದ ಉದ್ಘಾಟನಾ ಸಮಾರಂಭ: ಕಹಳೆ ನ್ಯೂಸ್

ಬಂಟ್ವಾಳ: ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಕಛೇರಿ ವಿಕ್ರಮಾದಿತ್ಯದ ಉದ್ಘಾಟನಾ ಸಮಾರಂಭವು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ  ಎಡನೀರು ಮಠ, ಕಾಸರಗೋಡು ಇವರ ದಿವ್ಯ ಹಸ್ತದಿಂದ ನೆರವೇರಿತು. ಮೊದಲಿಗೆ ಗಣಪತಿ ಹೋಮವು ಶ್ರೀ ಸೂರ್ಯ ನಾರಾಯಣ ಭಟ್ ಕಶೆಕೋಡಿ ಇವರ ನೇತೃತ್ವದಲ್ಲಿ ನಡೆಯಿತು.

ಕುಮಾರಿ ಪದ್ಮಶ್ರೀ ಪ್ರಾರ್ಥಿಸಿದರು. ಉದ್ಘಾಟನಾ ಸಮಾರಂಭದ ಆಶೀರ್ವಚನದಲ್ಲಿ ಸ್ವಾಮೀಜಿಯವರು ಯಾವುದೇ ಸಂಸ್ಕಾರ ವಿಲ್ಲದ ವಿದ್ಯೆ ಪರಿಮಳವಿಲ್ಲದ ಪುಷ್ಪದಂತೆ ಹಾಗೂ ರುಚಿ ಇಲ್ಲದ
ಹಣ್ಣಿನಂತೆ ಎನ್ನುತ್ತಾ ನಾವು ಕಲಿಯುವಂತಹ ಮಾಧ್ಯಮದ ಜೊತೆಗೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸುವಂತಹ ವ್ಯವಸ್ಥೆಯನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ದಲ್ಲಿ ಕಾಣಬಹುದು
ಎನ್ನುತ್ತಾ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಿವೇಕಾನಂದ ವಿದ್ಯಾವರ್ಧಕ ಸಂಫದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ವಿವೇಕಾನಂದರ ಉದಾಹರಣೆಯೊಂದಿಗೆ, ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯು ಸಂಸ್ಕಾರಯುತ ಮೂಲ ಶಿಕ್ಷಣದ ಜೊತೆಗೆ ತರಗತಿಯಲ್ಲಿ ಆಂಗ್ಲ ಮಾಧ್ಯಮ ಬೋಧನಾ ಶಿಕ್ಷಣಾ ವ್ಯವಸ್ಥೆ ಯನ್ನು ಕಲ್ಪಿಸುವ ನಿಟ್ಟಿನಲ್ಲಿ ತೆರೆಯಲಾಗಿದೆ ಎಂದು ತಿಳಿಸಿ ಮಕ್ಕಳಿಗೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ, ಶ್ರೀರಾಮ ಆಂಗ್ಲ ಮಾಧ್ಯಮ
ಶಾಲೆಯ ಪ್ರಾಂಶುಪಾಲರಾದ ಶ್ರೀ ತಿರುಮಲೇಶ್ವರ ಪ್ರಶಾಂತ್ ಶ್ರೀಮಾನ್ ಉಪಸ್ಥಿತರಿದ್ದರು. ವಿದ್ಯಾಕೇಂದ್ರದ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು, ಎಲ್ಲಾ ವಿಭಾಗದ ಪ್ರಮುಖರು, ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾಶ್ರೀ ಮಾತಾಜಿ ನಿರೂಪಿಸಿ, 10ನೇ ತರಗತಿ ಯ ವಿದ್ಯಾರ್ಥಿ ನಿಯರಾದ ಕುಮಾರಿ ವೈಷ್ಣವಿ, ಎಸ್, ಕೆ ಸ್ವಾಗತಿಸಿ,ಕುಮಾರಿ ಮನಾಲಿ ದೇವಸ್ಯ ವಂದಿಸಿದರು.
ಕಾರ್ಯಕ್ರಮವು ಶಾಂತಿ ಮಂತ್ರದೊAದಿಗೆ ಕೊನೆಗೊಂಡಿತು.