Snapchat ನಲ್ಲಿ ಚಾಟ್ ಮಾಡುತ್ತಾ ಕಾರು ಚಾಲನೆ : ನದಿಗೆ ಬಿದ್ದ ಕಾರು, ಇಬ್ಬರು ಮೃತ್ಯು– ಕಹಳೆ ನ್ಯೂಸ್
ಭೋಪಾಲ್: ಕಾರು ಚಾಲನೆ ವೇಳೆ ಮೊಬೈಲ್ ಬಳಸಿದ ಪರಿಣಾಮ ಇಬ್ಬರು ಜೀವ ಕಳೆದುಕೊಂಡಿರುವ ಘಟನೆಯೊಂದು ಭೋಪಾಲ್‌ನ ಕೋಲಾರದಲ್ಲಿ ಸಂಭವಿಸಿದೆ.
ಮೃತರನ್ನು ಕಾರು ಚಲಾಯಿಸುತ್ತಿದ್ದ ವಿನೀತ್ (22) ಮತ್ತು ಪಲಾಶ್ ಗಾಯಕ್ವಾಡ್ (22) ಎನ್ನಲಾಗಿದ್ದು, ಕಾರಿನಲ್ಲಿದ್ದ ಪಿಯೂಷ್ (24) ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಘಟನೆ ಕುರಿತು ಮಾಹಿತಿ ನೀಡಿದ ಪಿಯೂಷ್, ಕಾರಿನಲ್ಲಿ ನಾವು ಮೂವರು ಗೆಳೆಯರು ಪ್ರಯಾಣಿಸುತಿದ್ದೆವು ವಿನೀತ್ ಕಾರು ಚಾಲನೆ ಮಾಡುತ್ತಿದ್ದ ಜೊತೆಗೆ ಚಾಲನೆ ವೇಳೆ ಸ್ನ್ಯಾಪ್‌ಚಾಟ್ ನಲ್ಲಿ ಚಾಟ್ ಮಾಡುತ್ತಿದ್ದ ಕಾರು ವೇಗವಾಗಿದ್ದ ಪರಿಣಾಮ ಇನಾಯತ್‌ಪುರ ಬಳಿಯ ಕೆರ್ವಾ ನದಿಯಾ ಮೇಲೆ ಬರುತ್ತಿದ್ದಂತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಬೇಲಿಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ ಈ ವೇಳೆ ಕಾರಿನ ಬಾಗಿಲು ಲಾಕ್ ಆಗಿದ್ದ ಪರಿಣಾಮ ಹೊರಬರಲು ಸಾಧ್ಯವಾಗದೆ ವಿನೀತ್ ಹಾಗೂ ಪಲಾಶ್ ಸ್ಥಳದಲ್ಲೇ ಮೃತಪಟ್ಟರು ನಾನು ಕಿಟಕಿ ಗಾಜು ಒಡೆದು ಹೊರ ಬಂದು ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಹೇಳಿದ್ದಾನೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಕಾರಿನಲ್ಲಿ ಸಿಲುಕಿದ್ದ ಇಬ್ಬರ ಮೃತದೇಹಗಳನ್ನು ಹೊರ ತಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಗೊಂಡಿರುವ ಪಿಯೂಷ್ ಗೆ ಆಸ್ಪತ್ತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಘಟನಾ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.