Saturday, January 18, 2025
ಬೆಂಗಳೂರುರಾಜ್ಯಸುದ್ದಿ

‘BPL’ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಇನ್ಮುಂದೆ ಜಿಲ್ಲಾ ಆಸ್ಪತ್ರೆಗಳಲ್ಲಿ ‘MRI, ಸಿಟಿ ಸ್ಕ್ಯಾನ್’ ಫ್ರೀ..!-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ  ಇದೀಗ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದಂತಹ ಫಲಾನುಭವಿಗಳಿಗೆ ಎಂ ಆರ್ ಐ ಹಾಗೂ ಸಿಟಿ ಸ್ಕ್ಯಾನಿಂಗ್ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ನಿನ್ನೆ ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಒಂದು ನಿರ್ಧಾರ ಕೈಗೊಂಡಿದ್ದು, ಬಡವರು ಈ ಸೇವೆಗೆ ದುಬಾರಿ ವೆಚ್ಚ ಭರಿಸಬೇಕಿತ್ತು. ಹೀಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸಲಾಗುತ್ತಿರುವ ಸಿಟಿ ಮತ್ತು ಎಂಆರ್​ಐ ಸ್ಕ್ಯಾನ್​ಗಳನ್ನು ಉಚಿತವಾಗಿಸಲು ನಿರ್ಣಯಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೋಗಿಗಳು ಅನಗತ್ಯವಾಗಿ ಸ್ಕ್ಯಾನ್​ಗೆ ಒಳಪಡುವುದನ್ನು ತಪ್ಪಿಸಲು, ಯೋಜನೆ ನಿಜವಾದ ಫಲಾನುಭವಿಯನ್ನು ತಲುಪುವುದನ್ನು ಖಚಿತಪಡಿಸಲು ಪಿಹೆಚ್​ಹೆಚ್ ಫಲಾನುಭವಿಗಳಿಗೆ ಉಚಿತವಾಗಿ ಹಾಗೂ ಇತರರಿಗೆ ಶೇ.70 ವಿಧಿಸಲು ನಿರ್ಣಯ ಕೈಗೊಳ್ಳಲಾಗಿದೆ. ಹಾಗಾಗಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ ಫಲಾನುಭವಿಗಳು ಇನ್ಮುಂದೆ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಎಂ ಆರ್ ಐ ಹಾಗೂ ಸಿಟಿ ಸ್ಕ್ಯಾನ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು