Saturday, January 18, 2025
ಕಡಬಶಿಕ್ಷಣಸುದ್ದಿ

ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳ ಸಾಧನೆ-ಕಹಳೆ ನ್ಯೂಸ್

ಕಡಬ : ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ, ಭಾರತ ಸಂಸ್ಕೃತಿ ಪ್ರತಿಷ್ಠಾನವು ನವೆಂಬರ್ 16 ರಂದು ನಡೆಸಿದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಕಡಬ ಇಲ್ಲಿನ 8 ಮತ್ತು 9ನೇ ತರಗತಿಯ 13 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮಾಯಣ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕವನ್ನು ಸುಮಂತ್ ಕೆ.ಪಿ. (9ನೇ ತರಗತಿ), ಪ್ರಥಮ ಸ್ಥಾನ,ಚಂದ್ರಮೌಳಿ ಬಿ. (8ನೇ ತರಗತಿ), ದ್ವಿತೀಯ ಸ್ಥಾನ, ಪ್ರಯಾಗ್ ಪಿ.ವಿ. (9ನೇ ತರಗತಿ), ತೃತೀಯ ಸ್ಥಾನ, ಎ.ಯು. ಮನ್ಮಿತ್ (8ನೇ ತರಗತಿ) ಇವರು ಪಡೆದಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕವನ್ನು ಪ್ರಣಮ್ಯ ಐ. (9ನೇ ತರಗತಿ), ಪ್ರಥಮ ಸ್ಥಾನ, ಜಾನ್ವಿ (9ನೇ ತರಗತಿ), ದ್ವಿತೀಯ ಸ್ಥಾನ, ಪ್ರೇಕ್ಷಾ ಪಿ.ಎಂ. (9ನೇ ತರಗತಿ),
ತೃತೀಯ ಸ್ಥಾನ, ಹರ್ಷಿತ್ (9ನೇ ತರಗತಿ) ಇವರು ಪಡೆದಿರುತ್ತಾರೆ. ವಿದ್ಯಾರ್ಥಿಗಳಾದ ಮನೀಶ್ (8ನೇ ತರಗತಿ), ಮನೋಜ್ (9ನೇ ತರಗತಿ), ಮನಸ್ವಿ (9ನೇ ತರಗತಿ), ರಿಷಿತಾ (9ನೇ ತರಗತಿ) ಮತ್ತು ಕುಷಿ (8ನೇ ತರಗತಿ) ಇವರು ಭಾಗವಹಿಸಿರುತ್ತಾರೆ.

ಸಾಧನೆಗೈದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕಿ ಕು| ಶ್ವೇತಾ ಕುಂದರ್ ಇವರು ಅಭಿನಂದಿಸಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ ಶ್ರೀಮತಿ ಶ್ವೇತಾ ಕೆ.ಆರ್. ಮಾರ್ಗದರ್ಶನ ನೀಡಿರುತ್ತಾರೆ.