Monday, January 20, 2025
ಸುದ್ದಿ

Breaking News : ರಾಷ್ಟ್ರಪ್ರೇಮಿ ಪತ್ರಕರ್ತ ಹೊಸದಿಗಂತ ಪತ್ರಿಕೆಯ ವಾರ್ತಾ ಸಂಪಾದಕ ಶ್ರೀ ಸಂತೋಷ್ ತಮ್ಮಯ್ಯ ಬಂಧನ – ಕಹಳೆ ನ್ಯೂಸ್

ಬೆಂಗಳೂರು : ರಾಷ್ಟ್ರಪ್ರೇಮಿ ಪತ್ರಕರ್ತ, ಹಿಂದುತ್ವದ ಪ್ರತಿಪಾದಕ ಹೊಸದಿಗಂತ ಪತ್ರಿಕೆಯ ವಾರ್ತಾ ಸಂಪಾದಕ ಶ್ರೀ ಸಂತೋಷ್ ತಮ್ಮಯ್ಯರನ್ನು ಕುಮಾರಸ್ವಾಮಿ ನೇತೃತ್ವದ ಜನರ ಮುಲಾಜಿನಲ್ಲಿ ಇಲ್ಲದ, ಕಾಂಗ್ರೆಸ್ ಜೆಡಿ(ಎಸ್) ಸರಕಾರ ಮದ್ಯರಾತ್ರಿ ಬಂಧಿಸಿದೆ.

ಕರ್ನಾಟಕದ ದೇಶಭಕ್ತ ವೀರರ ಸಂತತಿ, ದೇಶಕ್ಕೆ ಅತಿ ಹೆಚ್ಚು ಸೈನಿಕರನ್ನು ನೀಡಿದ ಕೊಡವ ಜನಾಂಗವನ್ನು ಟಿಪ್ಪು ಎಂಬ ಮತಾಂಧ ಹಿಂಸಿಸಿ, ಕೊಂದು, ಅತ್ಯಾಚಾರ ಮಾಡಿ, ಮತಾಂತರಿಸಿದ ಕಹಿಸತ್ಯ ಹೇಳಿದ ಪತ್ರಕರ್ತನನ್ನು ಮಧ್ಯರಾತ್ರಿಯಲ್ಲಿ ಬಂಧಿಸಿದೆ. ನೈಜ ಇತಿಹಾಸವನ್ನು ಹೇಳುವ ಧ್ವನಿಗಳನ್ನು ಬಂಧಿಸಿ, ಬೆದರಿಸುವ ಮೂಲಕ ಸತ್ಯದ ಕತ್ತು ಹಿಸುಕಬಹುದೆಂದು ಸರ್ಕಾರ ಭಾವಿಸಿದ್ದರೇ ಅದು ಈ ಸರಕಾರದ ಮೂರ್ಖತನ ಎಂಬ ಅಭಿಪ್ರಾಯವು ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು