ಕುಂಭಮೇಳದಲ್ಲಿ ಸನಾತನ ಧರ್ಮವನ್ನು ಸುಲಭ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಭಕ್ತರಿಗೆ ಅಮೂಲ್ಯ ಅವಕಾಶ !-ಕಹಳೆ ನ್ಯೂಸ್
ಪ್ರಯಾಗರಾಜ : ಪ್ರಯಾಗರಾಜದಲ್ಲಿ ನಡೆಯುವ ಕುಂಭಮೇಳದಲ್ಲಿ ಸನಾತನ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಆಧಾರವನ್ನು ವಿವರಿಸುವ ‘ಸನಾತನ ಸಂಸ್ಕೃತಿ ಪ್ರದರ್ಶನ’ವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನ 12 ಜನವರಿ 2025 ರಿಂದ 15 ಫೆಬ್ರುವರಿ 2025ರ ವರೆಗೆ ಸನಾತನ ಸಂಸ್ಥೆ ಶಿಬಿರ, ಸೆಕ್ಟರ್ 9, ಗಂಗೇಶ್ವರ ಮಹಾದೇವ ಮಾರ್ಗ, ಪ್ರಯಾಗರಾಜದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ತೆರೆದಿರುತ್ತದೆ. ಸನಾತನ ಧರ್ಮದ ಕುರಿತು ಸುಲಭ ಭಾಷೆಯಲ್ಲಿ ಮಾಹಿತಿ ನೀಡುವ ಈ ಪ್ರದರ್ಶನಕ್ಕೆ ಕುಂಭಮೇಳದ ಭಕ್ತರು ಭೇಟಿ ನೀಡಬೇಕು ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿದ್ದಾರೆ.
ಹಿಂದೂ ರಾಷ್ಟ್ರದ ಬಗ್ಗೆ ಜಾಗೃತಿಯ ಅವಶ್ಯಕತೆ
ಈ ಸಂದರ್ಭದಲ್ಲಿ ಶ್ರೀ. ರಾಜಹಂಸ ಅವರು ಮುಂದಿನಂತೆ ಹೇಳಿದರು, “ಕುಂಭಮೇಳವು ಕೋಟ್ಯಾಂತರ ಭಕ್ತರ ಭಕ್ತಿಯ ಮಹಾಸಂಗಮವಾಗಿದೆ. ಆದರೆ, ಅನೇಕ ಭಕ್ತರಿಗೆ ಸನಾತನ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳ ಹಿಂದೆ ಇರುವ ಶಾಸ್ತ್ರದ ಅರಿವು ಇಲ್ಲ. ಇದರಿಂದ ಅವರಿಗೆ ಅಪೇಕ್ಷಿತವಿರುವಷ್ಟು ಆಧ್ಯಾತ್ಮಿಕ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಕಾನ್ವೆಂಟ್ ಶಾಲೆಗಳಲ್ಲಿ ಬೈಬಲ್ ಮತ್ತು ಮದರಸಗಳಲ್ಲಿ ಕುರಾನ್ ಕಲಿಸಲಾಗುತ್ತದೆ; ಆದರೆ ಸಾಮಾನ್ಯ ಹಿಂದೂಗಳಿಗೆ ತಮ್ಮ ಧರ್ಮವನ್ನು ಕಲಿಸುವಂತಹ ಯಾವುದೇ ವ್ಯವಸ್ಥೆ ಇಲ್ಲ. ಈ ಕಾರಣದಿಂದ, ‘ಸನಾತನ ಧರ್ಮ ಎಂದರೆ ಏನು?’, ‘ಅದನ್ನು ಹೇಗೆ ಪಾಲಿಸಬೇಕು?’ ಎಂಬುದು ಹಿಂದೂಗಳಿಗೆ ಗೊತ್ತಿಲ್ಲ. ಧಾರ್ಮಿಕ ಕಾರ್ಯಗಳನ್ನು ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಮಾಡಿದರೆ ಅದರಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ. ಭಾರತ ಸ್ವಾಭಾವಿಕವಾಗಿ ಹಿಂದೂ ರಾಷ್ಟ್ರವಾಗಿದೆ ಮತ್ತು ಸನಾತನ ಧರ್ಮೀಯರ ಹಿಂದೂ ರಾಷ್ಟ್ರದ ಕಲ್ಪನೆ ವಿಶ್ವ ಶಾಂತಿಗಾಗಿ ಇದೆ. ಈ ಉದ್ದೇಶಕದಿಂದ ‘ಸನಾತನ ಸಂಸ್ಕೃತಿ ಪ್ರದರ್ಶನ’ವನ್ನು ಆಯೋಜಿಸಲಾಗಿದೆ.”
ಪ್ರದರ್ಶನದ ವೈಶಿಷ್ಟ್ಯಗಳು :
‘ತೀರ್ಥಮಹಿಮೆ ಕಕ್ಷೆ’ ಮತ್ತು ‘ಹಿಂದೂ ರಾಷ್ಟ್ರ ಬೋಧ ಕಕ್ಷೆ’:
ಸನಾತನ ಸಂಸ್ಥೆಯ ಸಾಧಕ ಶ್ರೀ. ಸಂಜಯ್ ಸಿಂಗ್ ಅವರು ಪ್ರದರ್ಶನದ ವೈಶಿಷ್ಟ್ಯಗಳನ್ನು ವಿವರಿಸುತ್ತಾ ಮುಂದಿನಂತೆ ಹೇಳಿದರು, ಸನಾತನ ಸಂಸ್ಥೆಯು 2001ರ ಕುಂಭಮೇಳದಿಂದ ಈ ರೀತಿಯ ಪ್ರದರ್ಶನಗಳ ಮೂಲಕ ಜಾಗೃತಿಯನ್ನು ಹೆಚ್ಚಿಸುತ್ತಿದೆ. ‘ತೀರ್ಥಮಹಿಮೆ ಕಕ್ಷೆ’: ಮತ್ತು ಹಿಂದೂ ರಾಷ್ಟ್ರ ಬೋಧ ಕಕ್ಷೆ ಎಂಬ ೨ ಸ್ವತಂತ್ರ ಕಕ್ಷೆಗಳ ಮೂಲಕ ಭಕ್ತರಿಗೆ ಮಾರ್ಗದರ್ಶನ ಮಾಡಲಾಗುವುದು. ಇಲ್ಲಿ 2 ಶ್ರಾದ್ಧ ಕ್ಷೇತ್ರಗಳು, 3 ತ್ರಿಸ್ಥಳಿ ಯಾತ್ರಾ ಸ್ಥಳಗಳು, 4 ಕುಂಭಕ್ಷೇತ್ರಗಳು ಮತ್ತು 7 ಮೋಕ್ಷಪುರಿಗಳ ಮಹತ್ವದ ಮಾಹಿತಿ ನೀಡಲಾಗುತವುದು. ‘ಹಿಂದೂ ರಾಷ್ಟ್ರ ಬೋಧ ಕಕ್ಷೆ’: ಇಲ್ಲಿ ಹಿಂದೂ ರಾಷ್ಟ್ರ ಸಂಕಲ್ಪನೆಗೆ ಸಂಬಂಧಿಸಿದ ಆಕ್ಷೇಪಗಳು ಮತ್ತು ಶಾಸ್ತ್ರಸಮ್ಮತ ಉತ್ತರಗಳನ್ನು ನೀಡಲಾಗುವುದು.
ಗ್ರಂಥಪ್ರದರ್ಶನ ಮತ್ತು ಮಾಹಿತಿ ಪುಸ್ತಕಗಳ ಸಮಾವೇಶ :
ಸನಾತನ ಧರ್ಮ, ಅಧ್ಯಾತ್ಮ ಸಾಧನೆ ಮತ್ತು ರಾಷ್ಟ್ರಹಿತ ಇವುಗಳ ಮೇಲಾಧಾರಿತ ಸನಾತನ ಸಂಸ್ಥೆಯ ಹಲವು ಗ್ರಂಥಗಳ ಪ್ರದರ್ಶನ ಕೂಡ ಇರಲಿದೆ. ಧರ್ಮಶಾಸ್ತ್ರವನ್ನು ವಿವರಿಸಲು ವಿಶೇಷ ಗ್ರಂಥ, ಫಲಕಗಳು ಮತ್ತು ವೀಡಿಯೊಗಳ ಮೂಲಕ ಮಾಹಿತಿ ನೀಡಲಾಗುವುದು.
ಸನಾತನ ಸಂಸ್ಥೆಯ ಸಾಧಕಿ ಸೌ. ಧನಶ್ರೀ ಕೇಳಶೀಕರ್ ಅವರು, “ಭಕ್ತರಿಗೆ ಸನಾತನ ಧರ್ಮದ ಮಹತ್ವ, ಆಧ್ಯಾತ್ಮಿಕ ಲಾಭ ಮತ್ತು ಪರಂಪರೆಯ ವೈಜ್ಞಾನಿಕ ಆಧಾರವನ್ನು ಅರ್ಥಮಾಡಿಕೊಳ್ಳಲು ಈ ಪ್ರದರ್ಶನ ಬಹಳ ಉಪಯುಕ್ತವಾಗುತ್ತದೆ. ಭಕ್ತರು ಈ ಪ್ರದರ್ಶನಕ್ಕೆ ಭೇಟಿ ನೀಡಿ ಇದರ ಲಾಭ ಪಡೆಯಬೇಕು” ಎಂದು ಹೇಳಿದರು.