Monday, January 20, 2025
ಸುದ್ದಿ

ಹಿಂದೂ ಅಧ್ಯಕ್ಷೆ ತುಳಸಿ ಗಬ್ಬರ್ಡ್ ಅಮೆರಿಕದ ಮುಂದಿನ ಅಧ್ಯಕ್ಷರಾಗಬಹುದು: ವೈದ್ಯ ಸಂಪತ್‌ ಶಿವಾಂಗಿ – ಕಹಳೆ ನ್ಯೂಸ್

ವಾಷಿಂಗ್ಟನ್‌: 2020 ರಲ್ಲಿ ಅಮೆರಿಕ, ಮೊದಲ ಹಿಂದೂ ಅಧ್ಯಕ್ಷರನ್ನು ಕಾಣಲಿದೆಯೇ? ಇಂಥದ್ದೊಂದು ಸುಳಿವು ಹೊರಬಿದ್ದಿದೆ. ಅಮೆರಿಕದ ಹವಾಯ್‌ ರಾಜ್ಯದಿಂದ ಸಂಸತ್‌ನ ಜನಪ್ರತಿನಿಧಿ ಸಭೆಗೆ ಸತತ 2 ನೇ ಬಾರಿಗೆ ಆಯ್ಕೆಯಾಗಿರುವ ತುಳಸಿ ಗಬ್ಬರ್ಡ್, 2020 ರಲ್ಲಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಬಹುದು ಎಂಬ ಸುಳಿವನ್ನು ಭಾರತೀಯ ಮೂಲದ ವೈದ್ಯ ಸಂಪತ್‌ ಶಿವಾಂಗಿ ನೀಡಿದ್ದಾರೆ.

ಕಾರ‍್ಯಕ್ರಮವೊಂದರಲ್ಲಿ ತುಳಸಿ ಕುರಿತು ಮಾತನಾಡುವ ವೇಳೆ ಇವರು ಅಮೆರಿಕದ ಮುಂದಿನ ಅಧ್ಯಕ್ಷರಾದರೂ ಆಗಬಹುದು ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಕಾರ‍್ಯಕ್ರಮದಲ್ಲಿ ನೆರೆದಿದ್ದ ಅಪಾರ ಸಂಖ್ಯೆ ಭಾರೀ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 2020 ರಲ್ಲಿ ತಾವು ಮತ್ತೊಮ್ಮೆ ಸ್ರ‍್ಧಿಸುವುದನ್ನು ಈಗಾಗಲೇ ಖಚಿತಪಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರದ್ದೇ ಪಕ್ಷದ ತುಳಸಿ ಗಬ್ಬರ್ಡ್, ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಸೇರಿದಂತೆ ಹಲವು ಸಂಸದರು ಕೂಡಾ ತಮ್ಮ ಅಭಿಲಾಷೆಯನ್ನು ಹಲವು ಬಾರಿ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಭಾರತೀಯ ಸಮುದಾಯದಲ್ಲಿ ಬಹುಜನಪ್ರಿಯರಾಗಿರುವ ತುಳಸಿಗೆ ಅವಕಾಶ ಸಿಕ್ಕರೂ ಸಿಗಬಹುದು ಎನ್ನಲಾಗಿದೆ.

ತುಳಸಿ ಅವರ ತಂದೆ, ತಾಯಿ ಇಬ್ಬರೂ ಯುರೋಪಿಯನ್‌ ಮೂಲದ ಕ್ರೈಸ್ತ ರ‍್ಮೀಯರು. ಆದರೆ ಕಾಲ ಕ್ರಮೇಣ ತುಳಸಿ ಅವರ ತಂದೆ ಹಿಂದೂ ಧರ್ಮದಲ್ಲಿ ಆಸಕ್ತಿ ಹೊಂದಿ ಅದರ ಅಚರಣೆಗೆ ತೊಡಗಿದ್ದರು. ಹೀಗಾಗಿ ತುಳಿಸಿ ಕೂಡಾ ಬಾಲ್ಯದಲ್ಲಿಯೇ ಹಿಂದೂ ಧರ್ಮವನ್ನು ಅಪ್ಪಿಕೊಂಡಿದ್ದರು.