ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಕ್ಷೇತ್ರದಲ್ಲಿ ಐತಿಹಾಸಿಕ ಬ್ರಹ್ಮಕಲಶೋತ್ಸವ ; ಫೆ. 22 ಮತ್ತು 23ರಂದು ಜರಗಲಿರುವ ಹೊರೆ ಕಾಣಿಕೆಯ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆ -ಕಹಳೆ ನ್ಯೂಸ್
ಕಾಪು : ಪುನರ್ ನಿರ್ಮಾಣಗೊಳ್ಳುತ್ತಿರುವ ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಕ್ಷೇತ್ರದಲ್ಲಿ ಐತಿಹಾಸಿಕ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯಲಿರುವ ಹಸಿರು ಹೊರೆ ಕಾಣಿಕೆ, ಸ್ವರ್ಣ ಗದ್ದುಗೆ, ರಜತ ರಥ ಹಾಗೂ ಸ್ವರ್ಣ ಮುಖದ ಬೃಹತ್ ಮೆರವಣಿಗೆಯನ್ನು ಆಯೋಜಿಸುವ ಕುರಿತು ನಡೆದ “ಸಮಾಲೋಚನಾ ಸಭೆಯಲ್ಲಿ ಶಾಸಕರು, ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25 ರಿಂದ ಮಾ. 5 ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಎಲ್ಲಾ ಪೂಜಾ ಕೈಂಕರ್ಯ ಸಾಂಗವಾಗಿ ನಡೆಯಲು ಮಾರಿಯಮ್ಮ ನ ಭಕ್ತ ರು ಸಂಪೂರ್ಣ ಸಹಕಾರ ನೀಡಬೇಕು ಎಲ್ಲರು ಕೈ ಜೋಡಿಸಿ ಸಮಯ ಮತ್ತು ಸಹಕಾರ ನೀಡಿ ಎಂದು ಫೆ. 22 ಮತ್ತು 23ರಂದು ಜರಗಲಿರುವ ಹೊರೆ ಕಾಣಿಕೆಯ ಬಗ್ಗೆ ಪೂರ್ವಭಾವಿಯಾಗಿ ಸಮಾಲೋಚನಾ ಸಭೆ ಯನ್ನು ಉದ್ದೇಶೀಸಿ ಮಾತನಾಡಿದರು ಪೂರ್ವಭಾವಿಯಾಗಿ ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದರು.
ಹೊರೆ ಕಾಣಿಕೆ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೃಹತ್ ಹೊರೆ ಕಾಣಿಕೆಯನ್ನು ನಿರೀಕ್ಷಿಸಲಾಗಿದೆ
ಫೆ.22 ರಂದು ದ.ಕ ಜಿಲ್ಲೆಯಿಂದ ಮತ್ತು ಫೆ. 23 ರಂದು ಉಡುಪಿ ಜಿಲ್ಲೆಯಿಂದ ಹೊರೆಕಾಣಿಕೆಯು ಶ್ರೀ ಕ್ಷೇತ್ರಕ್ಕೆ ಬರಲಿದೆ. ಈಗಾಗಲೇ ಉಭಯ ಜಿಲ್ಲೆಯ ದೇವಳಗಳು, ಸಂಘ ಸಂಸ್ಥೆಗಳ ಸಹಕಾರ ಕೋರಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಊರಿನಲ್ಲೂ ಸಭೆ ನಡೆಸಲಾಗುವುದು ಎಂದರು
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭ ಉಡುಪಿ ಶಾಸಕ ಯಶ್ ಫಾಲ್ ಸುವರ್ಣ,, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಕಾಪು ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಸ್ವರ್ಣ ಗದ್ದುಗೆ ಸಮಿತಿ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ ಮೊಗವೀರ ಮಹಾಜನಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ಹೊರೆ ಕಾಣಿಕೆ ಸಮಿತಿ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ, ಹೆಜಮಾಡಿ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತಸರ ದಯಾನಂದ ಹೆಜಮಾಡಿ, ಮಹಿಳಾ ಸಂಚಾಲಕಿಯರಾದ ಡಾ. ಸುನೀತಾ ಶೆಟ್ಟಿ ಕರ್ಜೆ, ಕಸ್ತೂರಿ ಪಂಜ, ಲಕ್ಷ್ಮೀ ಜನಾರ್ಧನ ದೇವಳದ ಮೊಕ್ತಸರ ಮನೋಹರ ಶೆಟ್ಟಿ ಕಾಪು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಹೊರೆ ಕಾಣಿಕೆ ಸಮಿತಿ ಕೋಶಾಧಿಕಾರಿ ಹರೀಶ್ ನಾಯಕ್, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಶೆಟ್ಟಿ ಪಾದುರ್ ಉಪಸ್ಥಿತರಿದ್ದರು.
ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.