ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಳೆ ಕದ್ರಿ ಮ್ಯೂಸಿಕಲ್ ನೈಟ್ಸ್ ಕಲರವ – ಕಹಳೆ ನ್ಯೂಸ್
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನದಲ್ಲಿ ಇದೇ ಜನವರಿ 21 ರ ಮಂಗಳವಾರ ಸಂಜೆ 7 ರಿಂದ ಕದ್ರಿ ಮೈದಾನದಲ್ಲಿ ಕದ್ರಿ ಇವೆಂಟ್ಸ್ ವತಿಯಿಂದ ಬಹು ನಿರೀಕ್ಷಿತ “ಕದ್ರಿ ಮ್ಯೂಸಿಕಲ್ ನೈಟ್ಸ್” ನಡೆಯಲಿದೆ ಎಂದು ಆಯೋಜಕರಾದ ಜಗದೀಶ್ ಕದ್ರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಕನ್ನಡದ ಸುಪ್ರಸಿದ್ಧ ಸಂಗೀತ ನಿರ್ದೇಶಕ, ಯುವ ಜನತೆಯ ಹಾಟ್ ಫೆವರೇಟ್ ರ್‍ಯಾಪರ್ ಗಾಯಕ ಆಲ್ ಓಕೆ, ಅವರ ಸಂಗೀತ ರಸಮಂಜರಿ ಇರಲಿದೆ. ಇತ್ತೀಚೆಗಿನ ಟ್ರೆಂಡ್ ಸೆಟ್ಟಿಂಗ್ ಹಾಡುಗಳಲ್ಲಿ ಅವರ ವಿಭಿನ್ನ ಶೈಲಿಯ ಹಾಡುಗಳೇ ಧೂಳೆಬ್ಬಿಸುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆಯುತ್ತಿವೆ.
ಭಾರತದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಮಣಿಕಾಂತ್ ಕದ್ರಿ, ಇತ್ತೀಚಿನ ಉಪೇಂದ್ರ ರವರ ಅಭಿನಯದ ಸೂಪರ್ ಹಿಟ್ ಚಿತ್ರ ಯುಐ ನಿರ್ಮಾಪಕ ಲಹರಿ ವೇಣು ಅಲ್ಲದೇ ತುಳುನಾಡ ಹೆಮ್ಮೆಯ ಕಲಾವಿದರಾದ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರ್, ರೂಪೇಶ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ವಿ.ಜೆ.ವಿನೀತ್, ಸಮತಾ ಅಮೀನ್, ಮುಂತಾದ ಸೆಲೆಬ್ರಿಟಿಗಳ ದಂಡೂ ಸಹ ಇರಲಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಲಿದೆ.
ಜೊತೆಗೆ ತುಳುನಾಡ ಹೆಮ್ಮೆಯ ಕದ್ರಿ ಇವೆಂಟ್‌ನ ಅನೇಕ ಕಲಾವಿದರು ಸಹ ಭಾಗವಹಿಸಲಿದ್ದು, ಜಾತ್ರಾ ಮಹೋತ್ಸವಕ್ಕೆ ಬರುತ್ತಿರುವ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಸೇರಿದಂತೆ ಎಲ್ಲರಿಗೂ ಆಯೋಜಕರು ಹಾರ್ದಿಕ ಸ್ವಾಗತವನ್ನು ಕೋರುತ್ತಿದ್ದಾರೆ.