ಗೌರವ ಡಾಕ್ಟರೇಟ್ ಪಡೆದ ನಟ, ಖ್ಯಾತ ಸಂಗೀತ ನಿರ್ದೇಶಕ ಸಾಧುಕೋಕಿಲ : ಸಾಧು ನಹೀ ಡಾಕ್ಟರ್ ಸಾಧು ಬೋಲೋ-ಕಹಳೆ ನ್ಯೂಸ್
ಮೈಸೂರು : ಸಂಗೀತ ಕ್ಷೇತ್ರದಲ್ಲಿನ ಸಾಧನೆ, ಸೇವೆ ಗುರುತಿಸಿ ಪ್ರದರ್ಶಕ ಕಲೆಗಳ ವಿಭಾಗದಿಂದ ಚಲನಚಿತ್ರ ನಟ, ಖ್ಯಾತ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಪುರಸ್ಕರಿಸಿ ಸನ್ಮಾನಿಸಿದೆ.
ವಿಶ್ವವಿದ್ಯಾಲಯದ 7, 8, 9ನೇ ವಾರ್ಷಿಕ ಘಟಿಕೋತ್ಸವದಲ್ಲಿ 2021-22ನೇ ಸಾಲಿನಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ನಟಿ ಗಿರಿಜಾ ಲೋಕೇಶ್, ವಿದ್ವಾನ್ ಸಿ. ಚೆಲುವರಾಜು, ಭರತನಾಟ್ಯ ಕಲಾವಿದ ಸತ್ಯನಾರಾಯಣರಾಜು, 2022-23ನೇ ಸಾಲಿನಲ್ಲಿ ಗಮಕ ವಿದ್ವಾನ್ ಎಂ. ಆರ್ ಸತ್ಯನಾರಾಯಣ, ಭರತನಾಟ್ಯ ಕಲಾವಿದೆ ಸಂಧ್ಯಾ ಪುರೆಚ ಇನ್ನಿತರರಿಗೆ ಡಾಕ್ಟರೇಟ್ ನೀಡಲಾಯಿತು.
ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿಯವರಿಗೆ 2020ರಲ್ಲಿ ನಡೆದ 100ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಸ್ವೀಕರಿಸಿರಲಿಲ್ಲ. ಹೀಗಾಗಿ ಈ ಬಾರಿ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಇದಲ್ಲದೇ 540 ವಿದ್ಯಾರ್ಥಿಗಳಿಗೆ ಪದವಿ ಪ್ರದಾನವೂ ಮಾಡಲಾಯಿತು.