Tuesday, January 21, 2025
ಸುದ್ದಿ

ಮಂಗಳೂರಲ್ಲಿ‌ ವ್ಯಕ್ತಿಗೆ ಚೂರಿ ತೋರಿಸಿ ದರೋಡೆ: ಇಬ್ಬರು ಆರೋಪಿಗಳ ಬಂಧನ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಲ್ಲಿ‌ ವ್ಯಕ್ತಿಗೆ ಚೂರಿ ತೋರಿಸಿ ನಗದು, ಮೊಬೈಲ್ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಕೊನೆಗೂ ಬಂಧಿಸಲಾಗಿದೆ. ಕಸಬಾ ಬೆಂಗ್ರೆಯ ನೌಶಾದ್, ಮಹಮ್ಮದ್ ನೌಫಾಲ್, ಬಂಧಿತ ಆರೋಪಿಗಳು.

ಮಂಗಳೂರಿನ ಜೋಕಟ್ಟೆ ರೈಲ್ವೆ ಟ್ರ್ಯಾಕ್ ಬಳಿ ಶುಕ್ರವಾರ ರಾತ್ರಿ ಈ ದರೋಡೆ ಪ್ರಕರಣ ನಡೆದಿತ್ತು. ಫಝಲ್ ಖಾನ್ ಎಂಬವರನ್ನು ತಡೆದು ಚೂರಿ ತೋರಿಸಿ 10 ಸಾವಿರ ರೂಪಾಯಿ ನಗದು ಹಾಗೂ 2 ಮೊಬೈಲ್ ಫೋನ್​ಗಳನ್ನು ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳಿಂದ 1,500 ರೂ. ನಗದು, 3 ಮೊಬೈಲ್, 1ಆ್ಯಕ್ಟಿವಾ ಹೋಂಡ ಸ್ಕೂಟರ್ ಮತ್ತು 1 ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 57,500 ರೂಪಾಯಿ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು