Wednesday, April 2, 2025
ಬೆಂಗಳೂರುರಾಜ್ಯಸುದ್ದಿ

ಮದ್ಯಪ್ರಿಯರಿಗೆ ಶಾಕ್ : ಇಂದಿನಿಂದ ಬಿಯರ್‌ ದರ ಏರಿಕೆ – ಕಹಳೆ ನ್ಯೂಸ್

ಬೆಂಗಳೂರು: ಇತ್ತೀಚಿಗಷ್ಟೇ ಬಸ್ ಪ್ರಯಾಣ ದರ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ್ದ ರಾಜ್ಯ ಸರ್ಕಾರ ಇದೀಗ ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದು,10 ರೂಪಾಯಿಯಿಂದ 45 ರೂಪಾಯಿ ವರೆಗೂ ಬೆಲೆ ಏರಿಕೆಯಾಗಿದೆ. ಇಂದಿನಿಂದಲೇ (ಜನವರಿ 20) ಪರಿಷ್ಕೃತ ದರ ಜಾರಿಯಾಗಿದೆ.

ವಿಶೇಷತೆ ಎಂದರೆ ಒಂದು ವರ್ಷದಲ್ಲಿ ಬಿಯರ್ ಬೆಲೆ ಮೂರರಷ್ಟು ಏರಿಕೆಯಾಗಿದೆ. ಸಾಧಾರಣವಾಗಿ ಬಜೆಟ್‍ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್ ಮಂಡನೆಯಾಗುವ ಮೊದಲೇ ಬಿಯರ್ ದರ ಏರಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ ಹೆಚ್ಚಳ ಮಾಡಿದೆ. ದುಬಾರಿ ಬೆಲೆಯ ಬಿಯರ್ ದರ ಏರಿಕೆಯಾಗಿಲ್ಲ. ಬದಲಾಗಿ 300 ರೂ. ಒಳಗಡೆ ಇರುವ ಮದ್ಯದ ದರವನ್ನು ಅಬಕಾರಿ ಇಲಾಖೆ ಏರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಜೆಟ್‍ಗೂ ಮುನ್ನವೇ ಬಿಯರ್ ದರ ಏರಿಕೆ ಮಾಡಿದೆ. ಈಗಾಗಲೇ ರಾಜ್ಯ ಸರ್ಕಾರವು ವಿವಿಧ ವಸ್ತುಗಳ ಹಾಗೂ ಸೇವೆಗಳ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ. ಇದರ ನಡುವೆ ಮದ್ಯ ಪ್ರಿಯರಿಗೂ ದೊಡ್ಡ ಶಾಕ್ ಕೊಡಲಾಗಿದೆ. ಒಂದೊಂದು ಸೇವೆ ಹಾಗೂ ವಸ್ತುಗಳ ಬೆಲೆ ಏರಿಕೆಗೆ ಸಾರ್ವಜನಿಕರು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಲ್ಲೇ ಇದ್ದಾರೆ. ಇದರ ನಡುವೆ ಬಿಯರ್ ಬೆಲೆಯೂ ಭರ್ಜರಿ ಹೆಚ್ಚಳವಾಗಿದೆ.

ಇನ್ನು ಬಿಯರ್ ಬೆಲೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಕಂಪನಿಗಳು ಹಾಗೂ ಮದ್ಯ ಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಬಿಯರ್ ಬೆಲೆ ಕರ್ನಾಟಕದಲ್ಲಿ ಹೆಚ್ಚಳವಾಗಿದೆ.

ಬಿಯರ್ ದರ ಪರಿಷ್ಕರಿಸಲು ಕಳೆದ 2024ರ ಆಗಸ್ಟ್ನಲ್ಲಿಯೇ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ನಾನಾ ಕಾರಣಗಳಿಂದ ದರ ಪರಿಷ್ಕರಣೆ ಕಡತಕ್ಕೆ ಮುಖ್ಯಮಂತ್ರಿಗಳು ಸಹಿ ಹಾಕಿರಲಿಲ್ಲ. ಈಗ, ಮುಖ್ಯಮಂತ್ರಿಗಳು ದರ ಏರಿಕೆಗೆ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರೀಮಿಯಂ ಬಿಯರ್ ಬೆಲೆ ಏರಿಕೆಗೆ ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತಕರಾರು ವ್ಯಕ್ತಪಡಿಸಿದೆ. ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚಿನ ಬೆಲೆಗೆ ಬಿಯರ್ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಬಿಯರ್ ಮಾರಾಟ ಕಡಿಮೆಯಾಗಿದೆ ಎಂದು ಹೇಳಿದೆ.ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಿಯರ್ ಮಾರಾಟ ಎರಡು ಪಟ್ಟು ಹೆಚ್ಚಾಗಿದೆ. ಕೋವಿಡ್ ನಂತರದ ಅವಧಿಯಲ್ಲಿ ಗ್ರಾಹಕರ ನಡವಳಿಕೆಯಲ್ಲಿನ ಬದಲಾವಣೆ ಮತ್ತು ಬೇಸಿಗೆಯ ತಾಪಮಾನದಲ್ಲಿನ ಏರಿಕೆ ಕೂಡ ಬಿಯರ್ ಬೇಡಿಕೆ ಹೆಚ್ಚಲು ಕಾರಣ ಎಂದು ಮೂಲಗಳು ತಿಳಿಸಿವೆ.

ಯಾವುದೇ ಮಾದರಿಯ ಬಿಯರ್ ಬಾಟಲ್ ತೆಗೆದುಕೊಂಡರೂ 10 ರೂಪಾಯಿ ದರ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.ಕಳೆದ ವರ್ಷದ ಅಂತ್ಯದಲ್ಲಿ ಕರ್ನಾಟಕದಲ್ಲಿ ಲಿಕ್ಕರ್ ಬೆಲೆಗಳನ್ನು ಪರಿಷ್ಕರಣೆ ಮಾಡಲಾಗಿತ್ತು. ಆಗಸ್ಟ್ 27 ರಿಂದ ಹೊಸ ದರ ಜಾರಿಯಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಪ್ರೀಮಿಯಂ ಬ್ರಾಂಡ್ಗಳ ದರದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು.ಪ್ರಮುಖವಾಗಿ ರಮ್, ವಿಸ್ಕಿ, ಬ್ರಾಂಡಿಗಳ ಬೆಲೆ ಕಡಿಮೆಯಾಗಿತ್ತು.

ಯಾವ ಬ್ರಾಂಡ್ ಬೀಯರ್ ದರ ಎಷ್ಟು ಏರಿಕೆ?
ಲೆಜೆಂಡ್ – 145(100)
ಪವರ್ ಕೂಲ್ -155(130)
ಬ್ಲ್ಯಾಕ್ ಫೋರ್ಟ್ -160(145)
ಹಂಟರ್ -190 (180)
ವುಡ್‍ಪೆಕರ್ ಕ್ರೆಸ್ಟ್ – 250(240)
ವುಡ್‍ಪೆಕರ್ ಗ್ಲೈಡ್ -240(230)

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ