Sunday, March 30, 2025
ಕ್ರೈಮ್ದಕ್ಷಿಣ ಕನ್ನಡದೆಹಲಿಬೆಂಗಳೂರುರಾಜ್ಯಸುದ್ದಿ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ; ಪ್ರಮುಖ ಆರೋಪಿ, ನಿಷೇಧಿತ PFI ಸದಸ್ಯ ಅತೀಖ್‌ ಅಹ್ಮದ್‌ ಬಂಧನ – ಕಹಳೆ ನ್ಯೂಸ್

ನವದೆಹಲಿ/ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.

ಅತೀಖ್‌ ಅಹ್ಮದ್‌ ಬಂಧಿತ ಆರೋಪಿ. ಪ್ರಕರಣದಲ್ಲಿ ಇದುವರೆಗೆ 21 ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ. 2022 ರ ಜುಲೈನಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಉಳಿದ ಆರು ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದ್ದು, ಅವರ ತಲೆಗೆ ಇನಾಮು ಘೋಷಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಿಎಫ್‌ಐ ನಾಯಕತ್ವದ ಮಾರ್ಗದರ್ಶನದಲ್ಲಿ ಅತೀಖ್, ಪ್ರಕರಣದ ಪ್ರಮುಖ ಸಂಚುಕೋರ ಎಂದು ಗುರುತಿಸಲ್ಪಟ್ಟ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿ ಸಹಾಯ ಮಾಡಿದ್ದ. ಜನರಲ್ಲಿ ಭಯ ಮತ್ತು ಕೋಮು ಅಶಾಂತಿಯನ್ನು ಹುಟ್ಟುಹಾಕಲು ಪಿಎಫ್‌ಐ ಕಾರ್ಯಸೂಚಿಯ ಭಾಗವಾಗಿ ಮುಸ್ತಫಾ ಕೊಲೆಯನ್ನು ಯೋಜಿಸಿ ಕಾರ್ಯಗತಗೊಳಿಸಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಮುಸ್ತಫಾ ಪರಾರಿಯಾಗಿದ್ದ. ಅತೀಖ್ ಆತ ಎಸ್ಕೇಪ್‌ ಆಗಲು ಅನುಕೂಲ ಮಾಡಿಕೊಟ್ಟಿದ್ದ. ಮೇ 2024 ರಲ್ಲಿ ಮುಸ್ತಫಾ ಬಂಧನವಾಗುವವರೆಗೂ ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಅತೀಕ್ ಸಹಾಯ ಮಾಡಿದ್ದ.

2022 ರ ಆಗಸ್ಟ್‌ನಲ್ಲಿ ಸ್ಥಳೀಯ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡಿದ್ದ NIA ತನಿಖೆಯ ಸಂದರ್ಭದಲ್ಲಿ, ‘PFI “PFI ಸೇವಾ ತಂಡಗಳು” ಎಂದು ಕರೆಯಲ್ಪಡುವ ರಹಸ್ಯ ತಂಡಗಳನ್ನು ರಚಿಸಿದೆ. ನೆಟ್ಟಾರು ಥರದವರನ್ನು ಗುರಿಯಾಗಿಸಿ ಹತ್ಯೆಗಳನ್ನು ನಡೆಸಲು ಶಸ್ತ್ರಾಸ್ತ್ರ ಮತ್ತು ಕಣ್ಗಾವಲು ತರಬೇತಿ ಪಡೆದಿದೆ’ ಎಂದು ತಿಳಿಸಿತ್ತು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ