Sunday, March 30, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಹಿಂದೂ ಧರ್ಮದ ಸಂಸ್ಕಾರ -ಸಂಸ್ಕೃತಿಗಳ ಸಹಿತ ಬಗ್ಗೆ ಮಕ್ಕಳಿಗೆ ಧರ್ಮ ಶಿಕ್ಷಣ -ಕಹಳೆ ನ್ಯೂಸ್

ಪುತ್ತೂರು: ಹಿಂದೂ ಧರ್ಮದ ಸಂಸ್ಕಾರ -ಸಂಸ್ಕೃತಿಗಳ ಸಹಿತ ಬಗ್ಗೆ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಕಾರ್ಯವೊಂದು ಹಳ್ಳಿ ಹಳ್ಳಿಯಲ್ಲಿಯು ಪ್ರಾರಂಭಿಸುವ ಮಹತ್ವದ ಪ್ರಯತ್ನವೊಂದು ಪುತ್ತೂರಿನಲ್ಲಿ ಅನುಷ್ಠಾನದ ಹಂತದಲ್ಲಿದೆ.

ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸುಬ್ರಹ್ಮಣ್ಯ ನಟ್ಟೋಜ ಅವರ ಇದರ ರೂವಾರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಸಮಾಜದ ಸರ್ವ ಜಾತಿ ಸಂಘಟನೆಗಳನ್ನು ಒಂದುಗೂಡಿಸಿ ಸನಾತನ ಪರಂಪರೆಯ ಮೌಲ್ಯಗಳನ್ನು ಪ್ರತಿಪಾದಿಸುವ ಧಾರ್ಮಿಕ ಶಿಕ್ಷಣ ನೀಡಲು ವೇದಿಕೆ ಇದಾಗಲಿದ್ದು ಮೊದಲ ಹಂತದ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಿರಲಿದೆ ಶಿಕ್ಷಣ
ಶ್ರೀ ಮಹಾಲಿಂಗೇಶ್ವರ ದೇವಳದ ನಟ ರಾಜ ವೇದಿಕೆಯಲ್ಲಿ ಮೊದಲ ಹಂತದ ಸಭೆ ನಡೆದಿದೆ. ಸುಮಾರು 26 ಜಾತಿ ಸಂಘಟನೆಗಳ ಪ್ರಮುಖರು ಇದಕ್ಕೆ ಸಹಮತ ಸೂಚಿಸಿದ್ದಾರೆ. ತಾಲೂಕು ಕೇಂದ್ರ ಮತ್ತು ಗ್ರಾಮ ಕೇಂದ್ರಗಳಲ್ಲಿ ಉಪ ಸಮಿತಿ ರಚನೆ ಪ್ರಗತಿಯಲ್ಲಿದೆ. ಆಯಾ ಸಮಿತಿಗಳೇ ನೇತೃತ್ವ ವಹಿಸಿಕೊಂಡು ಗ್ರಾಮಗಳ ಶ್ರದ್ಧಾ ಕೇಂದ್ರದಲ್ಲಿ ವಾರದಲ್ಲಿ ಒಂದು ದಿನ ನಿರ್ದಿಷ್ಟ ಅವಧಿಯ ಧಾರ್ಮಿಕ ಶಿಕ್ಷಣ ತರಗತಿ ನಡೆಸಲಾಗುತ್ತದೆ.

ಶಿಕ್ಷಕರ ನೇಮಕ
ತರಬೇತಿ ಪಡೆದ ಶಿಕ್ಷಕರು ಬಂದು ಪಠ್ಯ ಆಧರಿತವಾಗಿ ಪಾಠ ಮಾಡುತ್ತಾರೆ. ಈ ತರಗತಿಗಳಲ್ಲಿ ಆಯಾ ಗ್ರಾಮಗಳ ಮಕ್ಕಳು ಭಾಗವಹಿಸುವಂತೆ ಮಾಡುವುದು, ಶಿಕ್ಷಕರಿಗೆ ನೀಡುವ ಗೌರವಧನವನ್ನು ದೇಣಿಗೆ ಸಂಗ್ರಹದ ಜವಾಬ್ದಾರಿ ಆಯಾ ಗ್ರಾಮ ಸಮಿತಿಗೆ ಸೇರಿದ್ದಾಗಿದೆ. ತಾಲೂಕು ಮಟ್ಟದಲ್ಲಿ ಪ್ರಾಜ್ಞರು, ವಿದ್ವಾಂಸರು ಮತ್ತು ಸಮುದಾಯ ಸಂಘಟನೆಗಳ ಮುಖಂಡ ರನ್ನು ಒಳಗೊಂಡ ಮೇಲುಸ್ತುವಾರಿ ಸಮಿತಿ ಇರಲಿದ್ದು, ಅಗತ್ಯದ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವ ಕೆಲಸವೂ ಈ ಸಮಿತಿ ಮೂಲಕ ನಡೆಯಲಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವ ಳದ ಹಿಂದಿನ ವ್ಯವಸ್ಥಾಪನಾ ಸಮಿತಿಯ ಅವಧಿಯಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಯೋಜನೆ ಪ್ರಾರಂಭಿಸಿತ್ತು. ದೇವಳದ ವತಿಯಿಂದಲೇ ಇದು ಜಾರಿಯಾಗಿತ್ತು. ಅಲ್ಲಲ್ಲಿ ಈ ಧಾರ್ಮಿಕ ಶಿಕ್ಷಣ ನೀಡುವ ಕಾರ್ಯ ಪ್ರಾರಂಭಗೊಂಡಿತ್ತು. ಇದು ಎರಡನೆಯದ್ದು.

ಶೃಂಗೇರಿ ಶ್ರೀಗಳ ಅಭಯ
ಶೃಂಗೇರಿ ಶಾರದಾ ಪೀಠದ ಜಗದ್ಗುರು ಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಅವರ ಅನುಗ್ರಹ ಮತ್ತು ಮಾರ್ಗದರ್ಶನ ಹಿಂದೂ ಧಾರ್ಮಿಕ ಶಿಕ್ಷಣಕ್ಕಿದೆ. ಧಾರ್ಮಿಕ ಶಿಕ್ಷಣಕ್ಕೆ ಬೇಕಾದ ಪಠ್ಯವನ್ನು ಶೃಂಗೇರಿಂದಲೇ ಸಿದ್ಧಪಡಿಸಿ ತರಲಾಗುತ್ತದೆ. ಧಾರ್ಮಿಕ ಶಿಕ್ಷಣ ನೀಡುವ ಶಿಕ್ಷಕರಿಗೆ ಶೃಂಗೇರಿಯಿಂದಲೇ ತರಬೇತಿ ನೀಡಲಾಗುತ್ತದೆ. ಧಾರ್ಮಿಕ ಶಿಕ್ಷಣ ಪೂರ್ತಿ ಚೌಕಟ್ಟು ಶೃಂಗೇರಿ ಪೀಠದ ಮಾರ್ಗದರ್ಶನದಲ್ಲಿ ನಡೆಯಲಿದೆ.

ಯೋಜನೆ ಜಾರಿ ಹೇಗೆ?
-ತಾಲೂಕು, ಗ್ರಾಮ ಕೇಂದ್ರಗಳಲ್ಲಿ ಊರಿನವರ ಉಪಸಮಿತಿ ರಚಿಸಿ, ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೆ ಕ್ರಮ.
-ಗ್ರಾಮಗಳ ಶ್ರದ್ಧಾ ಕೇಂದ್ರದಲ್ಲಿ ವಾರದಲ್ಲಿ ಒಂದು ದಿನ ನಿರ್ದಿಷ್ಟ ಅವಧಿಯ ತರಗತಿ ನಡೆಯಲಿದೆ. ಊರಿನವರಿಂದಲೇ ಸಮಯ ನಿಗದಿ.
-ತರಬೇತಿ ಪಡೆದ ಶಿಕ್ಷಕರಿಂದ ಪಠ್ಯ ಆಧಾರಿತವಾಗಿ ಪಾಠ. ಗ್ರಾಮ ಸಮಿತಿ, ಊರವರಿಂದ ಸಂಗ್ರಹಿಸಿದ ಹಣದಿಂದ ಗೌರವಧನ.
-ತಾಲೂಕು ಮಟ್ಟದಲ್ಲಿ ಪ್ರಾಜ್ಞರು, ವಿದ್ವಾಂಸರು, ಸಮುದಾಯಗಳ ಮುಖಂಡರ ಮೇಲುಸ್ತುವಾರಿ ಸಮಿತಿ ರಚನೆ.

ಕಲಿಸುವ ವೇದಿಕೆ ಸೃಷ್ಟಿ
ಹಿಂದೂ ಧರ್ಮದಲ್ಲಿ ಆಳವಾದ ಜ್ಞಾನ ಸಂಪತ್ತು, ಶ್ರೇಷ್ಠ ಪರಂಪರೆ, ಉತ್ಕೃಷ್ಟ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳಿದ್ದರೂ ಅದನ್ನು ಮಕ್ಕಳಿಗೆ ಕಲಿಸುವ ಸೂಕ್ತ ವೇದಿಕೆ ಇಲ್ಲ. ಹೀಗಾಗಿ ಪುತ್ತೂರು ತಾಲೂಕಿನಲ್ಲಿ ಧಾರ್ಮಿಕ ಶಿಕ್ಷಣ ಆರಂಭವಾಗಲಿದೆ.
-ಸುಬ್ರಹ್ಮಣ್ಯ ನಟ್ಟೋಜ

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ