Tuesday, January 21, 2025
ಸುದ್ದಿ

ಚಿಕ್ಕಮಗಳೂರಿನ ಪೊಲೀಸ್ ಡಾಗ್ ಡೈಸಿ ಅನಾರೋಗ್ಯದಿಂದ ಸಾವು – ಕಹಳೆ ನ್ಯೂಸ್

ಚಿಕ್ಕಮಗಳೂರು: ಏಳು ವರ್ಷದಲ್ಲಿ ಎಂಟು ಮರ್ಡರ್, 15 ಕಳ್ಳತನ, 30 ಅದ್ಭುತ ಸುಳಿವು ಸೇರಿದಂತೆ 105 ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿಕ್ಕಮಗಳೂರಿನ ಪೊಲೀಸ್ ಡಾಗ್ ಡೈಸಿ ಅನಾರೋಗ್ಯದಿಂದ ಸಾವನ್ನಪ್ಪಿದೆ.

ಕಳೆದ ಮೂರು ತಿಂಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಡೈಸಿಗೆ ಸಾಕಷ್ಟು ಚಿಕಿತ್ಸೆ ಕೊಡಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕ್ಕಮಗಳೂರು ಪೊಲೀಸರ ನೆಚ್ಚಿನ ಶ್ವಾನವಾಗಿದ್ದ ಡೈಸಿಗೆ ಇಂದು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು