Wednesday, January 22, 2025
ಸುದ್ದಿ

ಮಲ್ಪೆ ಬೀಚ್ ನಲ್ಲಿ ಸಿರಿ ದಾನ್ಯಗಳ ಮಹತ್ವ ಮತ್ತು ಅಗತ್ಯ ಕಾಲ್ನಡಿಗೆ ಕಾರ್ಯಕ್ರಮ -ಕಹಳೆ ನ್ಯೂಸ್

ಮಲ್ಪೆ : ಮನುಕುಲದ ಪ್ರಾರಂಭ ಬೆಳೆ ಬಿತ್ತಿ ಬೆಳೆದ ಸಿರಿ ದಾನ್ಯ ಎಂಬ ಇತಿಹಾಸ ವಿದೆ, ಋಗ್ವೇದ ದಲ್ಲಿ ಯು ಸಿರಿದಾನ್ಯ ದ ಉಲ್ಲೇಖ ವಿದೆ, ಸಾದು ಸಂತರು ಸಿರಿ ದಾನ್ಯ ವನ್ನೇ ಬಳಸುತ್ತಿದ್ದರು ಪುರಂದರ ದಾಸರು, ಕನಕ ದಾಸರು ತಮ್ಮ ವಚನಗಳಲ್ಲಿ ರಾಗಿಯ ಬಗ್ಗೆ ಬರೆದಿದ್ದಾರೆ.

ಇತ್ತೀಚಿನ ಆದುನಿಕತೆ ನೆಪದಲ್ಲಿ ಆಹಾರ ಪದ್ಧತಿ ಬದಲಾಗಿ ರೋಗಗಳಿಂದ ನರಳುವಂತೆ ಆಗಿದೆ, ಮನುಷ್ಯ ನಿಗೆ ತಾನು ಏನು ತಿನ್ನಬೇಕು ಎಷ್ಟು ತಿನ್ನಬೇಕು ಗೊತ್ತಿಲ್ಲದಷ್ಟು ಜ್ಞಾನಿಯಾದ ಪ್ರತಿ ಮನೆಯಲ್ಲೂ ಮದು ಮೆಹ , ಕ್ಯಾನ್ಸರ್ ನಂತ ಭಯಂಕರ ರೋಗ ಮನು ಕುಲವನ್ನು ನಲುಗಿಸುತ್ತಿದೆ ಇದರ ಪರಿಹಾರ ಮದ್ದಲ್ಲ, ಆಹಾರ ಬದಲಾವಣೆ ಆಗಬೇಕು, ಕೃಷಿ ಆದುನಿಕ ಪದ್ಧತಿ ಯನ್ನು ಬಿಟ್ಟು ಸಾವಯವ ಕೃಷಿ ಗೆ ತಿರುಗಲೆ ಬೇಕು, ಸರಕಾರ ಮತ್ತು ಸಮಾಜ ರೈತ ನಿಗೆ ಸಹಕಾರ ನೀಡಬೇಕು, ಎಲ್ಲಾ ಕಾಲ ದಲ್ಲೂ ಎಲ್ಲಾ ಮಣ್ಣಿ ನಲ್ಲೂ, ಕಡಿಮೆ ನೀರಿನಲ್ಲಿ ಬೆಳೆ ಯಬಹುದಾ ದಂತ ಸಿರಿ ದಾನ್ಯ ಬೆಳೆ ಬೆಳೆ ಸಿ ಎಲ್ಲರು ಬಳಸಬೇಕು ಎಂದು ಉಡುಪಿ ಜಿಲ್ಲಾ ಡಳಿತ ಮತ್ತು ಕೃಷಿ ಇಲಾಖೆ ಉಡುಪಿ ಜಿಲ್ಲೆ ಆಯೋಜಿಸಿದ ಸಿರಿ ದಾನ್ಯ ನಡಿಗೆ ಕಾರ್ಯಕ್ರಮ ದಲ್ಲಿ ಶ್ರೀನಿವಾಸ್ ರಾವ್ ಕಾರ್ಯಕ್ರಮ ವನ್ನು ಉದ್ದೇಶೀಸಿ ಮಾvನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ನಗರ ಸಭಾ ಸದಸ್ಯ ವಿಜಯ್ ಕೊಡವೂರು, ಮಣ್ಣು ನೀರು, ಗಾಳಿ ಸಂರಕ್ಷಣೆ ಮಾಡುವಲ್ಲಿ ನಾವು ಕೆಲಸ ಮಾಡಲೇ ಬೇಕು ಕಾರ್ಯಕ್ರಮಗಳು ವೇದಿಕೆ ಯಲ್ಲಿ ಆಗಿ ಏನು ಸಾಧನೆ ಆಗಲ್ಲ ಪ್ರತಿವನೆ ಪ್ರತಿ ಮನ ಮುಟ್ಟುವಂತ ಮಹತ್ತರ ಬದಲಾವಣೆಗೆ ಪ್ರಯತ್ನ ಪಡುವಲ್ಲಿ ಪೃಕೃತಿಯ ಸೇವೆ ಮಾಡೋಣ, ಹಿರಿಯರು ನಮಗಾಗಿ ಕಷ್ಟ ಪಟ್ಟ ಪ್ರಕೃಕತಿ ಉಳಿಸೋಣ ಎಂದರು, ಉಡುಪಿ ಜಿಲ್ಲಾ ಆಪರ ಜಿಲ್ಲಾಧಿಕಾರಿ ನಾಗರಾಜ್ ನಾಯಕ್ ಮತ್ತು ಉಡುಪಿಜಿಲ್ಲಾ ಕೃಷಿ ಕ ಸಂಘ ದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿ ದರು ಮಲ್ಪೆ ಠಾಣೆ ಪೊಲೀಸ್ ಟಾಣಧಿಕಾರಿ ರವಿ, ಧನಂಜಯ ಮಲ್ಯ ಕೆವಿಕೆ,ಶ್ರೀಮತಿ ಪೂರ್ಣಿಮಾ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಉಡುಪಿ ಜಿಲ್ಲೆ, ಪ್ರದೀಪ್ ಹೆಬ್ಬಾರ್ ರಾಜ್ಯ ಪ್ರತಿನಿಧಿ ಕೃಷಿ ಸಂಘ, ಚಂದ್ರ ಶೇಖರ್ ನಾಯಕ್,ಉಪ ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆ ಇವರ ಮಾರ್ಗದರ್ಶನದಲ್ಲಿ
ಸಾವಿರಾರು ರೈತರು ಮತ್ತು ವಿದ್ಯಾರ್ಥಿಗಳು ಮಲ್ಪೆ ಬೀಚ್ ನಲ್ಲಿ 2 ಕಿಲೋಮೀಟರ್ ಕಾಲು ನಡಿಗೆ ನಡೆದು ಸೀ ವಾಕ್ ನಲ್ಲಿ ಕೊನೆ ಗೊಳಿಸಿ , ಎಲ್ಲರಿಗೂ ಸಿರಿ ದಾನ್ಯ ದ ಮಹತ್ವ ಮತ್ತು ಅಗತ್ಯತೆಯ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು