ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ದೀಕ್ಷಿತ್ ಕುಮಾರ್ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ-ಕಹಳೆ ನ್ಯೂಸ್
ಪುತ್ತೂರು : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ಜುಲೈ-ಆಗಸ್ಟ್ 2024ರಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಪ್ರಸ್ತುತ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಚಿಕ್ಕಮಗಳೂರು ಇಲ್ಲಿ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ತೂರು ಬನ್ನೂರು ಕರ್ಮಲ ನಿವಾಸಿಯಾಗಿರುವ ದೀಕ್ಷಿತ್ ಕುಮಾರ್ ರವರು ಡಿಸ್ಟಿಂಕ್ಷನಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಸುನಾದ ಸಂಗೀತ ಕಲಾ ಶಾಲೆ ಪುತ್ತೂರು ಇದರ ಗುರುಗಳಾದ ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಶಿಷ್ಯ ರಾಗಿದ್ದು, ದಿ. ರಮೇಶ್ ಎಚ್. ಎಸ್ ಮತ್ತು ಕೆ. ಕಮಲರವರ ಪುತ್ರರಾಗಿದ್ದಾರೆ.