ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡಬಿದ್ರೆ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ – ಕಹಳೆ ನ್ಯೂಸ್
ಮೂಡಬಿದ್ರೆ: ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡಬಿದ್ರೆ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ರಸ್ತೆ ಸುರಕ್ಷತಾ ಅಭಿಯಾನ. ಕಾರ್ಯಕ್ರಮ ಮೂಡಬಿದ್ರೆ ಪೊಲೀಸರ ಸಹಕಾರದೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ಮುಖ್ಯ ಪೋಲಿಸ್ ಅಧಿಕಾರಿ ಪ್ರದೀಪ್ ಕುಮಾರ್ ಚಾಲನೆಕೊಟ್ಟು ಮಕ್ಕಳಿಗೆ ರಸ್ತೆ ಸುರಕ್ಷತೆಯ ಪ್ರಾಮುಖ್ಯತೆ ಮತ್ತೆ ನಿಯಮವನ್ನು ತಿಳಿಸಿದರು ವಾಹನದೊಂದಿಗೆ ರಸ್ತೆಗೆ ಇಳಿಯುವ ಮೊದಲು ಅನುಮೋದಿತ ಚಾಲನಾ ಪರವಾನಗಿಯನ್ನು ಹೊಂದಿರುವುದು ಸಹ ಕಡ್ಡಾಯವಾಗಿದೆ. ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಸ್ತೆ ಸುರಕ್ಷತಾ ಸಂವೇದನೆ ಅತ್ಯಗತ್ಯ.
ರಸ್ತೆ ಸುರಕ್ಷತೆಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರಿಂದ ಪ್ರತಿನಿತ್ಯ ಸಂಭವಿಸುವ ಅಪಘಾತಗಳು ಮತ್ತು ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಮಹಿಳಾ ಪೊಲೀಸ ಅಧಿಕಾರಿ ಮಂಜುಳ ಅವರು 18 ವರ್ಷ ತುಂಬಿದ ನಂತರ ವಾಹನ ಪರವಾನಗಿ ಪಡೆದು ಗಾಡಿ ಓಡಿಸಬೇಕು ದ್ವಿಚಕ್ರ ವಾಹನದವರು ಕಡ್ಡಾಯ ಹೆಲ್ಮೆಟ್ ಧರಿಸಬೇಕು, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕ ನವೀನ್ ಎ ನಿರೂಪಿಸಿದರು, ಚಂದ್ರಪ್ಪ ಸ್ವಾಗತಿಸಿದರು, ಮಮತಾ ಗಣೇಶ್ ಧನ್ಯವಾದವಿತ್ತರು . ರಸ್ತೆ ಸುರಕ್ಷತಾ ರ್ಯಾಲಿಯನ್ನು ಪೋಲಿಸ್
ಅಧಿಕಾರಿ ಪ್ರದೀಪ್ ಕುಮಾರ್, ಮಹಿಳಾ ಪೊಲೀಸ ಅಧಿಕಾರಿ ಮಂಜುಳಾ, ಸಾಕಮ್ಮ, ಶಿಕ್ಷಕ ಭಾಸ್ಕರ್ ನೆಲ್ಯಾಡಿ ಮತ್ತು ಶ್ರೀದೇವಿ ಜೈನ್ ಸಂದ್ಯಾ ಶೇರಿಗಾರ್ ರವರ ಮಾರ್ಗದರ್ಶನದಲ್ಲಿ ನಡೆಯಿತು.