ದಕ್ಷಿಣ ಕನ್ನಡ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ,ಮಾರಾಟ ಮತ್ತು ಇತರ ಮಳಿಗೆಗಳಿಗೆ ಅವಕಾಶ -ಕಹಳೆ ನ್ಯೂಸ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಬರುವ ಫೆಬ್ರವರಿ 21 ಮತ್ತು 22ರಂದು ಮಂಗಳೂರು ವಿಶ್ವವಿದ್ಯಾನಿಲಯದ, ಮಂಗಳ ಸಭಾಂಗಣದಲ್ಲಿ ಡಾ.ಪ್ರಭಾಕರ ಶಿಶಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ .ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮಾರಾಟ ಮತ್ತು ಇತರ ಮಳಿಗೆಗಳಿಗೆ ಅವಕಾಶವಿದೆ.
ಮಳಿಗೆಗಳ ವ್ಯವಸ್ಥೆಗೆ ಜನವರಿ 31ರೊಳಗೆ ಪುಸ್ತಕ ಮಳಿಗೆ ಮತ್ತು ಇತರೆ ಮಾರಾಟ ಮಳಿಗೆ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ , ಸಂಚಾಲಕರಾದ ತ್ಯಾಗಂ ಹರೇಕಳ (890 48 42 624), ಪ್ರಸಾದ ಎಸ್,(83 174 447 93) ಇವರನ್ನು ಸಂಪರ್ಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ. ಶ್ರೀನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.