Thursday, January 23, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಆಕಸ್ಮಿಕ ಬೆಂಕಿ ತಗುಲಿ ಗಂಭೀರ ಗಾಯಗೊಂಡ ಮಹಿಳೆ ; ಚಿಕಿತ್ಸೆ ಫಲಕಾರಿಯಾಗದೆ. ಮೃತ್ಯು-ಕಹಳೆ ನ್ಯೂಸ್

ವಿಟ್ಲ:ಕೆಲವು ದಿನಗಳ ಹಿಂದೆ ಸುಶೀಲ ಅವರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ಸೀರೆಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ.

ಅನಂತಾಡಿ ಗ್ರಾಮದ ಶಾಕೊಟ್ಟೆ ನಿವಾಸಿ ದಿ. ಹೊನ್ನಪ್ಪ ಗೌಡ ಅವರ ಪತ್ನಿ ಸುಶೀಲ(76) ಮೃತಪಟ್ಟ ಮಹಿಳೆ. ಮಾಹಿತಿ ಪ್ರಕಾರ ಸುಶೀಲ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದು, ಅಗ್ನಿ ಅವಘಡದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಈ ಸಂಬಂಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು