ಅಯೋಧ್ಯೆಯ ರಾಮಮಂದಿರದ ಲೋಕಾರ್ಪಣೆಯ ವರ್ಷಾಚರಣೆ ; ಆರ್ಯಾಡಿಯ ಅಶ್ವಥಕಟ್ಟೆಯಲ್ಲಿ “ಭಜನಾ ಸಂಕೀರ್ತನೆ” -ಕಹಳೆ ನ್ಯೂಸ್
ಕಾಪು: ವಿಶ್ವಹಿಂದೂ ಪರಿಷದ್ ಬಜರಂಗದಳ ಪಾಂಗಾಳ ಘಟಕದ ನೇತೃತ್ವದಲ್ಲಿ ಅಯೋಧ್ಯೆಯ ರಾಮಮಂದಿರದ ಲೋಕಾರ್ಪಣೆಯ ವರ್ಷಾಚರಣೆಯ ದಿನದ ಅಂಗವಾಗಿ ಜನವರಿ 22ರಂದು ಆರ್ಯಾಡಿಯ ಅಶ್ವಥಕಟ್ಟೆಯಲ್ಲಿ “ಭಜನಾ ಸಂಕೀರ್ತನೆ” ನಡೆಯಿತು.
ಈ ಕಾರ್ಯಕ್ರಮ ವನ್ನು ಉದಯಶೆಟ್ಟಿ ಕೊಟ್ಟಾರಿಮನೆ, ಸುಧಾಕರ್ ಡಿ ಅಮೀನ್ ಗುಡ್ಡೆ ಗರಡಿಮನೆ, ಚಂದ್ರಕಾAತ್ ಶೆಟ್ಟಿ ಕೊಟ್ಟಾರಿಮನೆ, ಸುಬ್ಬರಾವ್ ಪಾಂಗಾಳ, ಭಾಸ್ಕರ ಪೂಜಾರಿ ಆರ್ಯಾಡಿ ಯವರು ಭಜನಾ ಸಂಕೀರ್ತನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷದ್ ಪಾಂಗಾಳ ಘಟಕದ ಕಾರ್ಯದರ್ಶಿ ಕೃಷ್ಣ ಜಿ ಕೋಟ್ಯಾನ್, ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಖ ಶೆಟ್ಟಿ, ಪ್ರಮುಖರಾದ ಪ್ರವೀಣ್ ಶೆಟ್ಟಿ ,ಶೈಲೇಶ್ ಶೆಟ್ಟಿ ,ದಿನೇಶ್ ಪಾಂಗಾಳ ,ಸುಧೀಂದ್ರ ಶೆಟ್ಟಿ, ಗಿರೀಶ್ ಕುಮಾರ್ ,ದಯಾನಂದ ಶೆಣೈ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಪಾಂಗಾಳ ಸೋನು ಸುಬ್ರಹ್ಮಣ್ಯ ನಿರೂಪಿಸಿ ವಂದಿಸಿದರು.