Recent Posts

Sunday, January 19, 2025
ಸುದ್ದಿ

ಇನ್ನೂ ಉದ್ಘಾಟನೆ ಭಾಗ್ಯ ಕಾಣದ ಬಂಟ್ವಾಳದ ಇಂದಿರಾ ಕ್ಯಾಂಟೀನ್ – ಕಹಳೆ ನ್ಯೂಸ್

ಬಂಟ್ವಾಳ: ಕಳೆದ ರಾಜ್ಯ ಸಭಾ ಚುನಾವಣಾ ಹೊಸ್ತಿಲಿನಲ್ಲಿ ತರಾತುರಿಯಲ್ಲಿ ಆರಂಭಗೊಂಡ ಇಂದಿರಾ ಕ್ಯಾಂಟೀನ್ ಬಂಟ್ವಾಳದಲ್ಲಿ ಇನ್ನೂ ಕೂಡಾ ಉದ್ಘಾಟನೆ ಭಾಗ್ಯ ಕಂಡಿಲ್ಲ.‌

ತಮಿಳುನಾಡಿನ ಅಮ್ಮಾ ಮಾದರಿಯಲ್ಲಿ ರಾಜ್ಯ ಸರಕಾರ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಯೋಜನೆ ತಯಾರಿಸಿದ ಬಳಿಕ ಮಂಗಳೂರು ಸಹಿತ ಅನೇಕ ಕಡೆಗಳಲ್ಲಿ ಉದ್ಘಾಟನೆ ಕಂಡು ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ. ಆದರೆ ಬಂಟ್ವಾಳದ ಜನತೆ ಮಾತ್ರ ಈ ಇಂದಿರಾ ಕ್ಯಾಂಟೀನ್ ನ ಉಪಯೋಗದಿಂದ ವಂಚಿತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೇನು ನಿಧಾನವಾಗಿಯಾದರೂ ಉದ್ಘಾಟನೆಯಾಗುತ್ತೆ ಎಂದು ಅಂದುಕೊಂಡರೆ ಅದು ಮಾತ್ರ ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಬೆಳೆದಿದೆ ಇಲ್ಲಿನ ರಾಜಕೀಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿರಾ ಕ್ಯಾಂಟೀನ್ ಏನೋ ಸುಸಜ್ಜಿತ ವಾಗಿಯೇ ನಿರ್ಮಾಣ ಗೊಂಡರು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.‌ ಇಷ್ಟಕ್ಕೂ ಇಲ್ಲಿರುವ ಸಮಸ್ಯೆ ಕೇಳಿದ್ದೀರಾ. ಇಂದಿರಾ ಕ್ಯಾಂಟೀನ್ ನ ನಕ್ಷೆಯಲ್ಲಿದ್ದಂತೆ ಸುತ್ತಲೂ ಭದ್ರತಾ ರೂಪವಾಗಿ ಕಂಪೌಂಡ್ ನಿರ್ಮಾಣ ಮಾಡಲು ಪುರಸಭೆ ಗುತ್ತಿಗೆದಾರನಿಗೆ ತಿಳಿಸಿದೆ.

ಆದರೆ ಈ ಭಾಗದಲ್ಲಿ ರಸ್ತೆಯನ್ನು ಅತಿಕ್ರಮಣ ಮಾಡಲಾಗಿ ಕಂಪೌಂಡ್ ಕಟ್ಟಲಾಗುತ್ತದೆ ಎಂದು ಸ್ಥಳೀಯ ಪುರಸಭಾ ಸದಸ್ಯ ಹಾಗೂ ಸಾರ್ವಜನಿಕರ ವಿರೋಧ.

ಕಟ್ಟಡದ ಮೂಲ ನಕ್ಷೆ ಯ ಸಹಿತ ದಾಖಲೆ ಗಳನ್ನು ಕೇಳಿದರೂ ಇವರು ನೀಡುತ್ತಿಲ್ಲ ಯಾಕೆ ಎಂದು ಹಿರಿಯ ಪುರಸಭಾ ಸದಸ್ಯ ಗೋವಿಂದ ಪ್ರಭು ಅವರ ಮಾತು ‘ರಾಜ್ಯ ರಸ್ತೆಯನ್ನು ಅತಿಕ್ರಮಿಸಿ‌ ಇವರು ಕಂಪೌಂಡ್ ನಿರ್ಮಾಣ ಮಾಡಿದರೆ ಬಿಸಿರೋಡಿನಲ್ಲಿ ಇನ್ನು ಅನೇಕ ಕಡೆಗಳಲ್ಲಿ ರಸ್ತೆ ಅತಿಕ್ರಮಣವಾಗುವ ಎಚ್ಚರಿಕೆ ಯನ್ನು ಇವರು ಪುರಸಭೆಯ ಅಧಿಕಾರಗಳಿಗೆ ನೀಡಿದ್ದಾರೆ.

ಬುಧವಾರ ಕೆಲಸ ಆರಂಭ: ಈ ನಡುವೆ ಪುರಸಭಾ ಸಿ.ಒ.ರೇಖಾ ಶೆಟ್ಟಿ ಅವರು ಬುಧವಾರ ಗುತ್ತಿಗೆದಾರನ ಮೂಲಕ ಕಾಮಗಾರಿಯನ್ನು ಮರು ಪ್ರಾರಂಭ ಮಾಡಲು ಮುಂದಾಗಿದ್ದು ಕಂಪೌಂಡ್ ನಿರ್ಮಿಸಿಯೇ ಸಿದ್ದ ಎಂದು ಪಣ ತೊಟ್ಟಿದ್ದಾರೆ, ಈ ಕಾಮಗಾರಿಯ ಸಂಧರ್ಭದಲ್ಲಿ ಪೋಲೀಸ್ ಪ್ರೊಟೆಕ್ಷನ್ ನೀಡಬೇಕು ಎಂದು ಪೋಲೀಸರಿಗೆ ಕೇಳಿ ಕೊಂಡಿದ್ದಾರೆ.‌

ರಾಜಕೀಯವಾಗಿ ಇಂದಿರಾ ಕ್ಯಾಂಟೀನ್ ಬಳಕೆಯಾಗುತ್ತಿದಾ ಅಥವಾ ಪುರಸಭಾ ಅಧಿಕಾರಿ ಮತ್ತು ಪುರಸಭಾ ಸದಸ್ಯ ರ ನಡುವಿನ‌ ಗುದ್ದಾಟ ಇರಬಹುದೇ ಎಂಬುದು ಕುತೂಹಲ ಭರಿತ ವಿಷಯ.‌

ಇಷ್ಡಕ್ಕೂ ಇಲ್ಲಿ ವಾಹನ ನಿಲುಗಡೆ ಮಾಡಲು ಜಾಗದ ಸಮಸ್ಯೆಯಿರುವುದರಿಂದ ಮತ್ತು ಮಿನಿವಿಧಾನ ಸೌಧಕ್ಕೆ ತಾಗಿಕೊಂಡು ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿದ್ದರಿಂದ ಇಲ್ಲಿ ಕಂಪೌಂಡ್ ನಿರ್ಮಾಣ ಬೇಡ ಎಂಬುದು ಸಾರ್ವಜನಿಕ ಅಭಿಪ್ರಾಯ . ಆದರೆ ನಕ್ಷೆ ಪ್ರಕಾರ ಇಲ್ಲಿ ಕಂಪೌಂಡ್ ನಿರ್ಮಾಣ ಮಾಡಲೇಬೇಕು ಎಂದು ಇಲಾಖೆಯ ಹಠ.‌ ಇವರ ನಡುವಿನ ಜಗಳದಲ್ಲಿ ಬಡಪಾಯಿ ಜನರು ಬಸವಳಿಯುವಂತಾಯಿತು.‌