Tuesday, January 28, 2025
ಉಡುಪಿಜಿಲ್ಲೆಭಟ್ಕಳಸುದ್ದಿ

ಕಾಡು ಪ್ರಾಣಿ ಬೇಟೆ ಗೆ ಸಂಚು ಮೂವರು ಆರೋಪಿಗಳ ಬಂದನ -ಕಹಳೆ ನ್ಯೂಸ್

ಉಡುಪಿ: ಕಾಡು ಪ್ರಾಣಿ ಹತ್ಯೆಗೆ ಅರಣ್ಯ ಪ್ರವೇಶಿಸಿದ್ದ ಭಟ್ಕಳ, ಶಿರೂರು ಮೂಲದ ಮೂವರು ಆರೋಪಿಗಳನ್ನು ವಂಡಾರು ಹತ್ತಿರ ಅರಣ್ಯ ಇಲಾಖೆ ಸಿಬ್ಬಂದಿ ಗಳು ಬಂದಿಸಿದ್ದಾರೆ.

ಬಂಧಿತರಿಂದ ಒಂದು ಬಂದೂಕು 11ಕಾಡತೂಸು 4ಹರಿತವಾದ ಚಾಕುಗಳು, ಒಂದು ಮಾಂಸ ಮಾಡಲು ಉಪಯೋಗಿಸುವ ಮಚ್ಚು, ಒಂದು ಟಾರ್ಚ್ ಮೂರು ಮೊಬೈಲ್ ಫೋನ್ ಆರೋಪಿಗಳು ಬಳಸಿದ್ದ ಒಂದು ಆಟೋ ರಿಕ್ಷಾ ವನ್ನೂ ವಶಕ್ಕೆ ಪಡೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳಾದ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯ 23 ವರ್ಷ ಮುಂಡಳ್ಳಿ ಭಟ್ಕಳ, ವಾಸೀಂ ಅಕ್ರಂ 34 ವರ್ಷ ಶಿರೂರು ಗ್ರಾಮ, ಅಲಿ ಬಾಪು ಯಾಸಿನ್ 36 ವರ್ಷ ಶಿರೂರು ಗ್ರಾಮ ಎಂಬುವವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಆ ದಿನೇಶ್ , ಪ್ರಕಾಶ್ ಪೂಜಾರಿ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಜ್ಯೋತಿ, ಸಂದೇಶ್ ಕುಮಾರ್, ಗಣಪತಿ ವಿ ನಾಯ್ಕ್ ಹಾಗೂ ಶಂಕರನಾರಾಯಣ ವಲಯ ಸಿದ್ದಾಪುರ ವನ್ಯಜೀವಿ ವಲಯ ಆಗುಂಬೆ ವನ್ಯಜೀವಿ ವಲಯದ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.