ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಗಳ ದೈವಸ್ಥಾನ ವಾರ್ಷಿಕ ನೇಮೋತ್ಸವವು ಜ 22 ಮತ್ತು 23 ರಂದು ನಡೆಯಿತು-ಕಹಳೆ ನ್ಯೂಸ್
ಉಪ್ಪಿನಂಗಡಿ :ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಗಳ ದೈವಸ್ಥಾನ ವಾರ್ಷಿಕ ನೇಮೋತ್ಸವ ಮಕರ ಸಂಕ್ರಮಣದAದು ಗೊನೆ ಮುಹೂರ್ತವಾಗಿ , ಜ 18 ಕ್ಕೆ ಕೋಳಿಗೂಟ, ಜ 22 ನೇ ರಾತ್ರಿ ಅಂತರ ಮತ್ತು ದೇವಸ್ಯ ಭಂಡಾರ ಮನೆಯಿಂದ ಮುಗೇರಡ್ಕ ಕ್ಷೇತ್ರಕ್ಕೆ ದೈವದ ಭoಡಾರ ಆಗಮಿಸಿ ಶಿರಾಡಿ ದೈವಕ್ಕೆ ನೂತನವಾಗಿ ನಿರ್ಮಾಣಗೊಂಡು ಪುರಪ್ರವೇಶ ಮಾಡಿದ ಹುಲಿ ಬಂಡಿಯ ಸಮರ್ಪಣೆ ಕಾರ್ಯಕ್ರಮ ಜರುಗಿತು.
ದೈವಂಕುಲು, ಬಿರ್ಮೆರ್, ಕುಮಾರ, ಗಿಳಿರಾಮ, ಬಸ್ತಿನಾಯ್ಕ ಇನ್ನಿತರ ಪರಿವಾರ ದೈವಗಳ ನೇಮ ಕಾರ್ಯ ನಡೆಯಿತು. ಜ 23 ಬೆಳಿಗ್ಗೆ 9 ಗಂಟೆಯಿAದ ಕಲ್ಕುಡ ದೈವ ಪಿಲಿಚಾಮುಂಡಿ ದೈವ ಹಾಗೂ ಶಿರಾಡಿ ದೈವದ ಗಗ್ಗರ ಸೇವೆ ಆರಂಭವಾಗಿ ದಿನವಿಡೀ ದೈವದ ಸೇವೆಗಳು ನಡೆಯಿತು..
ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಮನದ ಕೋರಿಕೆಗಳನ್ನು ಪ್ರಾರ್ಥನೆ ಮಾಡಿ ಹರಕೆ ಒಪ್ಪಿಸಿ ದೈವದ ಗಂಧ ಪ್ರಸಾದ ಸ್ವೀಕಾರ ಮಾಡಿದರು. ಕ್ಷೇತ್ರದಲ್ಲಿ ನಡೆಯುವ ಮಹಾಅನ್ನದಾನ ಕಾರ್ಯದಲ್ಲಿ 25,000 ಕ್ಕೂ ಮಿಕ್ಕಿ ಭಕ್ತರು ಅನ್ನ ಪ್ರಸಾದ ಸ್ವೀಕಾರ ಮಾಡಿ ದೈವದ ಕೃಪೆಗೆ ಪಾತ್ರರಾದರು.
ಈ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ,ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೋಟ್ಯಾಡಿ ಪುತ್ತೂರು,ಮಾಜಿ ಸಚಿವರಾದ ರಮಾನಾಥ ರೈ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಬೆಳ್ತಂಗಡಿ, ಪುತ್ತೂರು ಮಾಜಿ ಶಾಸಕರಾದ ಸಂಜೀವ ಗೌಡ ಪುತ್ತೂರು,ಯುವ ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ ಬೆಂಗಳೂರು , ಹಾಗೂ ಅನೇಕ ಗಣ್ಯರು, ದೇವಸ್ಥಾನ, ದೈವಸ್ಥಾನ ದೈವಸ್ಥಾನ ಆಡಳಿತದಾರರು ಮೊದಲಾದವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು.