Recent Posts

Monday, January 27, 2025
ಬೆಂಗಳೂರುರಾಜ್ಯಸುದ್ದಿ

ಗೀಸರ್ ರಿಪೇರಿ ಮಾಡಿ ಕ್ಯಾಮರಾ ಅಳವಡಿಸಿದ ಕಾಮುಕ : ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೆಲ್!-ಕಹಳೆ ನ್ಯೂಸ್

ಬೆಂಗಳೂರು : ಮನೆಯಲ್ಲಿ ಯಾವುದೇ ವಸ್ತು ಹಾಳಾದಾಗ ರಿಪೇರಿ ಮಾಡುವವರನ್ನು ಕರೆಸಿ ರಿಪೇರಿ ಮಾಡಿಸುತ್ತೇವೆ. ಆದರೆ ರಿಪೇರಿ ಮಾಡುವವರು ನಂಬಿಕಸ್ತರು ಇದ್ದರೆ ಒಳ್ಳೇದು. ಏಕೆಂದರೆ ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಗೀಸರ್ ರಿಪೇರಿ ಮಾಡುವವ ಒಬ್ಬ ಗೀಸರ್ ನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೆಲ್ ಮಾಡಿರುವ ಘಟನೆ ವರದಿಯಾಗಿದೆ.


ಹೌದು ಬೆಂಗಳೂರಿನ ಬನ್ನೇರುಘಟ್ಟದ ಸಿ.ಕೆ.ಪಾಳ್ಯದ ಮನೆಯೊಂದರಲ್ಲಿ ಗೀಸರ್ ಫಿಟ್​ ಮಾಡುವ ನೆಪದಲ್ಲಿ ಬಂದಿದ್ದ ಮುರಳಿ ಎಂಬಾತ ರಹಸ್ಯ ಕ್ಯಾಮರಾವನ್ನು ಅಳವಡಿಸಿದ್ದಾನೆ. ಕಳೆದ ಒಂದು ವರ್ಷದ ಹಿಂದೇನೆ ಆತ ಈ ಕ್ಯಾಮರಾ ಅಳವಡಿಸಿದ್ದ ಎನ್ನಲಾಗಿದೆ. ಆದರೆ ಮನೆಯವರು ಗೊತ್ತಿಲ್ಲದೇ ಹಾಗೆ ಬಾತ್ ರೂಂ ಬಳಸಿದ್ದಾರೆ.ಆದರೆ ಸ್ನಾನಗೃಹ ಬಳಸಿದ ಮಹಿಳೆಯ ಖಾಸಗಿ ಫೋಟೋಗಳನ್ನು ರೆಕಾರ್ಡ್ ಮಾಡಿಕೊಂಡ ಗೀಸರ್ ಫೀಟ್‌ ಮಾಡಿದ ಕಿರಾತಕ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಒಂದು ವರ್ಷದಿಂದ ಕಾಮುಕ ಮುರುಳಿ ಮಹಿಳೆಗೆ ನಾನು ಕರೆದಲ್ಲಿಗೆ ಬರಬೇಕು. ಅಕಸ್ಮಾತ್ ಬರದೇ ಹೋದರೆ ಫೋಟೋ, ವಿಡಿಯೋ ಎಲ್ಲ ವೈರಲ್ ಮಾಡಿ ಮರ್ಯಾದೆ ತೆಗಿತೀನಿ ಅಂತ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿ ಮಹಿಳೆ ಈ ವಿಷಯ ಯಾರಿಗೂ ಹೇಳಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಈತನ ಕಾಟ ಹೆಚ್ಚಾಗಿ ಮಹಿಳೆ ಮನೆಯಲ್ಲಿ ಎಲ್ಲ ವಿಷಯ ಹೇಳಿದ್ದಾಳೆ. ಆಗ ಸ್ಥಳೀಯ ನಿವಾಸಿಗಳು ಈತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು